ಯಡ್ಡಿಯನ್ನು ಜೈಲಿಗೆ ತಳ್ಳಿದ ಬಾಷಾ ವಿರುದ್ಧ ಎಫ್ಐಆರ್
ಬೆಂಗಳೂರು,
ಅ. 29 : ಭೂ ಹಗರಣಕ್ಕೆ ಸಂಬಂಧಿಸಿದಂತೆ ಒಂದರ ಹಿಂದೊಂದರಂತೆ ಕ್ರಿಮಿನಲ್ ಮೊಕದ್ದಮೆಗಳನ್ನು ಜಡಿದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಜೈಲಿಗೆ ತಳ್ಳಲು ಕಾರಣರಾದ ವಕೀಲ ಸಿರಾಜಿನ್ ಬಾಷಾ ವಿರುದ್ಧವೇ ಈಗ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. id="toptextpromo">6ನೇ
ಎಸಿಎಂಎಂನಲ್ಲಿ ಗಜೇಂದ್ರ ಎಂಬುವವರು, ಯಡಿಯೂರಪ್ಪ ವಿರುದ್ಧ ಸಿರಾಜಿನ್ ಬಾಷಾ ನಕಲಿ ದಾಖಲಿ ಸೃಷ್ಟಿಸಿ ನ್ಯಾಯಾಲಯದ ದಿಕ್ಕು ತಪ್ಪಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಖಾಸಗಿ ದೂರನ್ನು ಸ್ವೀಕರಿಸಿದ್ದ ಮ್ಯಾಜಿಸ್ಟ್ರೇಟ್ ಅವರು ಸಿರಾಜಿನ್ ಬಾಷಾ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಇದರಂತೆ
ಹಲಸೂರು ಪೊಲೀಸರು ಸಿರಾಜಿನ್ ಬಾಷಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಯಡಿಯೂರಪ್ಪ ಅವರನ್ನು ಜೈಲಿಗೆ ತಳ್ಳಲು ಕಾರಣವಾದ ದಾಖಲೆಗಳ ಸತ್ಯಾಸತ್ಯಗಳನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಾಷಾ ಅವರು ಸಲ್ಲಿಸಿದ್ದ ದಾಖಲೆಗಳು ನಕಲಿ ಅಥವಾ ಸುಳ್ಳು ಎಂಬುದು ಸಾಬೀತಾದರೆ ಜೈಲಿಗೆ ಹೋಗುವ ಸರದಿ ಬಾಷಾ ಅವರದಾಗಲಿದೆ.











Click it and Unblock the Notifications