ಕೃಷ್ಣಾ ಮೇಲ್ದಂಡೆ ಮೇಲೆ ಗೌಡರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ?

ಕೃಷ್ಣಾ ಮೇಲ್ದಂಡೆ ಗುತ್ತಿಗೆ ಯೋಜನೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮಗಳ ಕುರಿತಂತೆ ಅಧಿಕಾರಿಗಳ ಮೇಲೆ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ. ಆದರೆ ದೇವೇಗೌಡರ ವಿರುದ್ಧ ತನಿಖೆ ನಡೆಸುವ ವಿಚಾರ ಪ್ರಸ್ತಾಪವಾಗಿಲ್ಲ.
ಆದರೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ರೇವಣ್ಣ ಅನಗತ್ಯ ಪ್ರತಿಕ್ರಿಯೆ, ಸ್ಪಷ್ಟನೆ ನೀಡುತ್ತಿರುವುದನ್ನು ನೋಡಿದರೆ ಅವರೂ ಆರೋಪಿಗಳೇ? ಎಂಬ ಅನುಮಾನ ಮೂಡಿಸುತ್ತಿದೆ ಎಂದು ರವಿ ತೀಕ್ಷಣವಾಗಿ ಪ್ರತಿಕ್ರಿಯಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಆರೋಪ ಇದೆಯೇ ಹೊರತು ಅಪರಾಧಿಯಾಗಿಲ್ಲ. ತಮ್ಮ ವಿರುದ್ಧ ಆಪಾದನೆ ಬಂದ ತಕ್ಷಣವೇ ನೈತಿಕ ಹೊಣೆ ಹೊತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿದ ಆಡ್ವಾನಿ ಅವರ ರಥಯಾತ್ರೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು ಎಂದು ಅಡ್ವಾನಿ ಅವರ ಜನಚೇತನ ಯಾತ್ರೆ ವಿರುದ್ಧ ಟೀಕಿಸುತ್ತಿರುವ ರಾಜ್ಯ ಕಾಂಗ್ರೆಸ್ ವಿರುದ್ಧ ಅವರು ಹರಿಹಾಯ್ದರು.
'ಬಿಜೆಪಿಯ ಉತ್ಪಾದನಾ ಘಟಕ ಚೆನ್ನಾಗಿಯೇ ಇದೆ. ಆದರೆ ಕಾಂಗ್ರೆಸ್‌ನ ಪ್ರೊಡಕ್ಷನ್ ಯೂನಿಟ್ ಕೆಟ್ಟಿದೆ. ಆ ಪಕ್ಷಕ್ಕೆ ರಥಯಾತ್ರೆಯ ಬಗ್ಗೆ ಮಾತನಾಡುವ ಹಕ್ಕಿಲ್ಲ' ಎಂದೂ ಸಿ.ಟಿ.ರವಿ ಟೀಕಿಸಿದರು.












Click it and Unblock the Notifications