ಮರಳು ಲಾರಿ ಮುಷ್ಕರಕ್ಕೆ ಕುಮಾರಣ್ಣ ಸಾಥ್

ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಅ.28ರಂದು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಹೇಳಿದ್ದಾರೆ.
ಮರಳು ಬೇಡಿಕೆ: ಪ್ರತಿದಿನ ಬೆಂಗಳೂರು ನಗರದಲ್ಲಿ 3,000 ಹಾಗೂ ರಾಜ್ಯದಲ್ಲಿ 15 ಸಾವಿರ ಲೋಡ್ ಮರಳು ಅಗತ್ಯವಿದೆ. ಮೆಟ್ರೊ ರೈಲು ಕಾಮಗಾರಿ, ಮೇಲು ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಮರಳು ಅಗತ್ಯವಿದೆ.
ಆದರೆ ಮರಳು ಸಾಗಣೆಗೆ ಲಂಚ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರಕಾರ ವಿಫಲಗೊಂಡಿದೆ. ರಾಜ್ಯದ 389 ಪ್ರದೇಶಗಳಲ್ಲಿ ಮರಳು ತೆಗೆಯಲು ಸರ್ಕಾರ ಅವಕಾಶ ನೀಡಿದೆ. ಆದರೆ ಮರಳು ಸಾಗಿಸುವ ಸಂದರ್ಭದಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ.
ಸಾರ್ವಜನಿಕರಿಗೆ 10 ಸಾವಿರ ರೂಪಾಯಿಗೆ ಒಂದು ಲಾರಿ ಲೋಡ್ ಮರಳು ಸಿಗುತ್ತಿತ್ತು. ಆದರೆ ಸರಕಾರದ ಬೇಜವಾಬ್ದಾರಿ ನೀತಿಯಿಂದಾಗಿ ಒಂದು ಲೋಡ್ ಮರಳಿಗೆ 40 ಸಾವಿರ ರೂಪಾಯಿಗೆ ಹೆಚ್ಚಿದೆ.
ತಮಿಳುನಾಡು ಮಾದರಿಯಲ್ಲಿ ಮರಳು ನೀತಿ ಜಾರಿಗೊಳಿಸಬೇಕು. ಕುಮಾರಸ್ವಾಮಿ ಅವರ ಕಾಲದಲ್ಲಿ ಸ್ಪಷ್ಟವಾದ ಮರಳು ಗಣಿಗಾರಿಕೆ ನೀತಿ ಜಾರಿಗೆ ಬಂದಿತ್ತು. ಆದರೆ, ನಂತರ ಕ್ರಮ ಮರಳು ಸಾಗಣೆ ದಂಧೆಗೆ ಸರ್ಕಾರ ತಲೆಬಾಗಿದೆ.
ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಲಾರಿಗಳೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಷಣ್ಮುಗಪ್ಪ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications