ಕಾರ್ಕಳದ ಕುಡುಕ ಭಾವನಿಂದ ನಾದಿನಿಗೆ ಚಾಕು
ಕಾರ್ಕಳ, ಅ.27: ಕುಡಿತದ ಅಮಲಿನಲ್ಲಿದ್ದ ವ್ಯಕ್ತಿ ತನ್ನ ಪತ್ನಿ ಮೇಲೆ ಕೋಪ ತೀರಿಸಿಕೊಳ್ಳುವ ಭರದಲ್ಲಿ ನಾದಿನಿಯನ್ನು ಇರಿದು ಕೊಂದ ಘಟನೆ ಕಾಬೆಟ್ಟು ಎಂಬಲ್ಲಿ ನಡೆದಿದೆ.
ಕಾಬೆಟ್ಟು ವಾಸಿ ಶೈಲಾ ಯಾನೆ ಶೈಲಜಾ(23) ಮೃತಪಟ್ಟ ದುರ್ದೈವಿ. ಪತಿ ಅರುಣ್ ನಿಂದ ದೂರಾಗಿದ್ದ ಈಕೆ ಅಕ್ಕ ಜ್ಯೋತಿಯೊಂದಿಗೆ ಕಾಬೆಟ್ಟಿನಲ್ಲಿ ವಾಸವಾಗಿದ್ದಳು.
ಜ್ಯೋತಿಯ ಪತಿ ತಮಿಳುನಾಡು ಸೋಮಯಪಾಳ್ಯನ ಪ್ರಭಾಕರ(33) ಎಂಬಾತನೇ ಕುಡುಕ ಹಾಗೂ ಈ ಸ್ಟೋರಿಯ ಕೊಲೆಗಾರ. ವೃತ್ತಿಯಿಂದ ಶಿಲ್ಪಿಯಾಗಿರುವ ಈತ ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದಿದ್ದ.
ನಾದಿನಿ ಜೊತೆ ಸರಸ?: ಈ ನಡುವೆ ನಾದಿನಿ ಶೈಲಜಾ ಕಂಡು ಪ್ರಭಾಕರನಿಗೆ ಏನೋ ಒಂಥರಾ ಆಗಿದೆ. ಮೊದಲೇ ಶಿಲ್ಪಿ ಶೈಲೂ ಅಂಗಾಂಗಳನ್ನು ವರ್ಣಿಸುತ್ತಾ ಆಕೆಗೆ ಹತ್ತಿರವಾಗಿದ್ದಾನೆ. ಈ ವಿಚಾರ ಪತ್ನಿ ಜ್ಯೋತಿಗೆ ಹೇಗೂ ಗೊತ್ತಾಗಿ ರಂಪಾಟ ಮಾಡಿದ್ದಾಳೆ.
ಮನೆ ಜಗಳ ವಿಪರೀತವಾದಾಗ ಸೀದಾ ಮದ್ಯದಂಗಡಿಗೆ ಹೋಗಿ ವಿಪರೀತವಾಗಿ ಕುಡಿದು ಮಧ್ಯಾಹ್ನದ ವೇಳೆಗೆ ಮನೆಗೆ ಹಿಂತಿರುಗಿ ಊಟ ಮಾಡಿ ಮಲಗಿದ್ದಾನೆ.
ಮಲಗಿದ್ದವನ ಕೆಣಕಿದ್ದು ತಪ್ಪಾಯ್ತು:ನಿದ್ದೆಯಲ್ಲಿದ್ದ ಪತಿಯನ್ನು ಕೆಣಕಿದ ಜ್ಯೋತಿಯ ಮೇಲೆ ಕೆಂಡಮಂಡಾಲನಾ ಪತಿರಾಯ ದಡದಡನೇ ಎದ್ದವನೇ ಮನೆಯಲ್ಲಿದ್ದ ಚೂರಿಯನ್ನು ಹುಡುಕಿ ತಂದು ಯುದ್ಧಕ್ಕೆ ನಿಂತಿದ್ದಾನೆ.
ಈ ಸಂದರ್ಭದಲ್ಲಿ ಅಕ್ಕನ ಪರ ವಹಿಸಿ ವಕಾಲತ್ತು ನಡೆಸುತ್ತಿದ್ದ ನಾದಿನಿ ಶೈಲಜಾ ಎದೆಗೆ ಚೂರಿಯಿಂದ ಇರಿದಿದ್ದಾನೆ. ತಡೆಯಲು ಬಂದ ರವಿ ಎಂಬ ಸಂಬಂಧಿಕನಿಗೂ ಗಾಯಗಳಾಗಿದೆ. ರವಿಯನ್ನು ಈಗ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಕೊಂದವ ಠಾಣೆಯಲ್ಲಿ ಹಾಜರ್ : ಪತ್ನಿ ಜ್ಯೋತಿ ಕೂಡಾ ಗಾಯಗೊಂಡಿದ್ದು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ನಂತರ ಚೂರಿಯನ್ನು ಹಿಡಿದು ಪ್ರಭಾಕರ ನಗರ ಠಾಣೆಗೆ ಬಂದು ಶರಣಾಗಿದ್ದಾನೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶಪ್ಪ, ಠಾಣಾಧಿಕಾರಿ ಪ್ರಮೋದ್ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ಮುಂದುವರೆದಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications