ದಲಿತ ಬಾಲಕಿಯರನ್ನು ಅಂಗಮರ್ಧನ ಕೇಂದ್ರಕ್ಕೆ ಅಟ್ಟಿದ ಶಿಕ್ಷಕಿಯರು

teachers-send-dalit-girls-to-massage-centres-rajasthan
ಬರ್ಮರ್ (ರಾಜಸ್ಥಾನ), ಅ. 26: ಆ ಅಬೋಧ ಬಾಲಕಿಯರು ಖಂಡಿತ ಅಂಗಮರ್ಧನ ಕಲಿಯಲು ಬಂದಿರಲಿಲ್ಲ. ಆದರೆ ಅವರ ಶಿಕ್ಷಕಿಯರು ಆ ಮಕ್ಕಳನ್ನು ಅಂಗಮರ್ದನ ಕೇಂದ್ರಕ್ಕೆ ಅಟ್ಟಿರುವ ಹೇಯ ಪ್ರಕರಣ ರಾಜಸ್ಥಾನದ ಬರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಇನ್ನೂ ಆತಂಕದ ವಿಷಯವೆಂದರೆ ಇಂತಹ ಕೇಂದ್ರಕ್ಕೆ ಹೋಗೋಲ್ಲ ಎಂದು ಬಾಲಕಿಯರು ಹಠ ಹಿಡಿದಾಗ ಅವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.

ಇದೆಲ್ಲ ನಡೆಯುತ್ತಾ ಇದ್ದುದ್ದು ಜಿಲ್ಲೆಯ ಸರಕಾರಿ ಸ್ವಾಮ್ಯದ ವಸತಿ ಶಾಲೆಯೊಂದರಲ್ಲಿ. ಒಂದಷ್ಟು ಮಕ್ಕಳು ಕಳೆದ ವಾರ ಧೈರ್ಯ ತಂದುಕೊಂಡು ಪೊಲೀಸರ ಮೊರೆ ಹೋದಾಗ ಜಿಲ್ಲಾಡಳಿತ ಶಾಲೆಯ ಅಷ್ಟೂ ಶಿಕ್ಷಕಿಯರು ಮತ್ತು ವಾರ್ಡನ್ ನನ್ನು ಕೆಲಸದಿಂದ ಕಿತ್ತು ಹಾಕಿದೆ. ಇವರೆಲ್ಲ ಗುತ್ತಿಗೆ ಆಧಾರದಲ್ಲಿ ಕೆಲಸದಲ್ಲಿದ್ದರು.

ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಇಲ್ಲಿನ ಬಯಾಟು ಪಟ್ಟಣದಲ್ಲಿರುವ ಕಸ್ತೂರ್ ಬಾ ಗಾಂಧಿ ವಸತಿ ಶಾಲೆಯ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ಇಂತಹ ಕ್ರೌರ್ಯಕ್ಕೆ ಅನೇಕ ದಿನಗಳಿಂದ ಈಡಾಗಿದ್ದರು. ಬಾಲಕಿಯೊಬ್ಬಳು ವಾರ್ಡನ್ ನ ಅಂಗಮರ್ಧನ ಬೇಡಿಕೆಗೆ ಸೊಪ್ಪು ಹಾಕದಿದ್ದಾಗ ಆ ಬಾಲಕಿಯನ್ನು ವಿವಸ್ತ್ರಗೊಳಿಸಿ, ಥಳಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ದೀಪಾವಳಿ ರಜೆ ಮುಗಿದು ಶಾಲೆ ಪುನರಾರಂಭವಾಗುತ್ತಿದ್ದಂತೆ ಹೊಸ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಬೀನಾ ಪ್ರಧಾನ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+