ಹಾಲಪ್ಪ ನಿಮ್ಗೆ ಅಷ್ಟು 'ಚೇತನ' ಇಲ್ಲ ಬಿಡ್ರಿ ಅಲ್ಲೇ ಇರಿ

Hratalu Halappa
ಸೊರಬ, ಅ.25: ಸಂಭ್ರಮದ ನಡುವೆ ಸಂಕಟ, ಮುಜುಗರ ಸ್ಥಿತಿ ಎದುರಾದರೆ ಹೇಗೆ ಪ್ರತಿಕ್ರಿಸುವುದು ಎಂಬುದರ ಬಗ್ಗೆ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ತರಬೇತಿ ತೆಗೆದುಕೊಳ್ಳುತ್ತಿದ್ದಾರೆ.

ಅಡ್ವಾಣಿ ಅವರ ಜನಚೇತನ ಯಾತ್ರೆಗೆ ಹೊರಡಲು ಟ್ರಿಮ್ ಆಗಿ ರೆಡಿಯಾಗಿದ್ದ ಹಾಲಪ್ಪ ಅವರಿಗೆ ಆಪ್ತರಿಂದ ಬೆದರಿಕೆ ಬಂದ ಮೇಲೆ ಡ್ರೆಸ್ ಚೇಂಜ್ ಮಾಡಿ ಶತಪಥ ಹಾಕುತ್ತಿದ್ದಾರಂತೆ.

ಆಗಿದಿಷ್ಟು: ಬೆಂಗಳೂರಿನ ಬಹಿರಂಗ ಭಾಷಣ ಕಾರ್ಯಕ್ರಮ ಮಿಸ್ ಮಾಡಿಕೊಳ್ಳಲ್ಲ. ಬಂದೇ ಬರ್ತೀನಿ ಎಂದು ಎಲ್ ಕೆ ಅಡ್ವಾಣಿ ಅವರು ಘೋಷಿಸಿದ ಮೇಲೆ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ.

ಕರ್ನಾಟಕದ ರಥಯಾತ್ರೆ ಸಂಚಾಲಕರಾಗಿದ್ದ ಗೃಹ ಸಚಿವ ಆರ್ ಅಶೋಕ್ ಬದಲಿಗೆ ಸಂಸದ ಪ್ರಹ್ಲಾದ್ ಜೋಶಿಗೆ ಸ್ಥಾನ ನೀಡಲಾಗಿದೆ. ಈ ಮಧ್ಯೆ ಹಾಲಪ್ಪ ಅವರಿಗೆ ಕಾಲ್ ಮಾಡಿದ ಕೆಎಸ್ ಈಶ್ವರಪ್ಪ ಅವರು ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ.

ರಥಯಾತ್ರೆ ನೋಡಲು ಖುಷಿಯಿಂದ ಹೊರಟ್ಟಿದ್ದ ಹಾಲಪ್ಪ ಅವರನ್ನು ಸೊರಬ ತಾಲೂಕಿನ ಬಿಜೆಪಿ ಘಟಕ ಹರತಾಳು ಹಾಲಪ್ಪ ಅವರಿಗೆ ಎಚ್ಚರಿಕೆ ನೀಡಿದ್ದು, ಅಡ್ವಾಣಿ ಯಾತ್ರೆಗೆ ಹೋದರೆ ಮತ್ತೆ ಜಿಲ್ಲೆಯಲ್ಲಿ ಕಾಲಿಡಲು ಬಿಡುವುದಿಲ್ಲ ಎಂದಿದೆ.

ಯಡಿಯೂರಪ್ಪ ಅವರು ಸೆರೆಮನೆಯಲ್ಲಿರುವಾಗ ಸಂಭ್ರಮ ಪಡುವುದು ಸರಿಯಲ್ಲ. ಅವರು ಜೈಲಿನಿಂದ ಹೊರಬಂದ ಮೇಲೆ ಸಂಭ್ರಮದ ಯಾತ್ರೆ ಮಾಡೋಣ. ಸೊರಬ ತಾಲೂಕಿನ ಯಾವೊಬ್ಬ ಬಿಜೆಪಿ ಸದಸ್ಯನೂ ಯಾತ್ರೆಗೆ ಹೋಗುವುದು ಬೇಡ ಎಂದು ತಾಲೂಕು ಬಿಜೆಪಿ ಘಟಕ ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+