ಅಪರಾಧಿಗಳಿಗೆ ನನ್ನ ಸಂಪುಟದಲ್ಲಿ ಸ್ಥಾನವಿಲ್ಲ: ಡಿವಿಎಸ್

DV Sadananda gowda
ಮಂಗಳೂರು, ಅ.25: ಭೂ ಹಗರಣ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಸಚಿವ ಸಂಪುಟ ಸಹದ್ಯೋಗಿಗಳು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವರು ಅಪರಾಧಿ ಎಂದು ಸಾಬೀತಾದರೆ ತಕ್ಷಣವೇ ಸಚಿವ ಸ್ಥಾನದಿಂದ ಕಿತ್ತು ಹಾಕುತ್ತೇನೆ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಹೇಳಿದ್ದಾರೆ.

ಆದರೆ, ಬಿಜೆಪಿ ನಾಯಕರನ್ನು ಆರಿಸಿಕೊಂಡು ಜಾಲದೊಳಗೆ ಸಿಲುಕಿಸುವ ತಂತ್ರಗಾರಿಕೆ ನಡೆದಿದೆ. ವಿಪಕ್ಷಗಳ ಈ ತಂತ್ರ ಬಯಲಿಗೆಳೆಯಬೇಕಿದೆ. ಆಧಾರವಿಲ್ಲದ ದೂರು ದಾಖಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸದಾನಂದ ಗೌಡ ಹೇಳಿದರು.

ಸರ್ಕಾರ ವಜಾ ಮಾಡುವುದಿಲ್ಲ. ಇದು ಜನರು ಕೊಟ್ಟಿರುವ ಆದೇಶ. ಕಾಂಗ್ರೆಸ್ಸಿಗರು ಮೊದಲು ಸೋನಿಯಾ ಅವರ ಸರ್ಕಾರ ಕೆಳಗಿಳಿಸಲಿ ಆಮೇಲೆ ನಮ್ಮನ್ನು ಪ್ರಶ್ನಿಸಲಿ ಎಂದರು.

ಭ್ರಷ್ಟರನ್ನು ಮಟ್ಟ ಹಾಕಲು ಬಿಜೆಪಿ ಬದ್ಧವಾಗಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು. ಸದಾನಂದ ಗೌಡರ ಮಾತಿನ ವೈಖರಿ ಪ್ರಭಾವಿ ನಾಯಕ ಆಶೋಕ್ ಹಾಗೂ ನಿರಾಣಿ ಅವರ ಆರೋಪಗಳತ್ತ ನೆಟ್ಟಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+