ತಿಹಾರ್ ಜೈಲಿಗೆ ಪರಪ್ಪನ ಅಗ್ರಹಾರ ಜೈಲು ಪೈಪೋಟಿ

ಬಿಎಸ್ ಯಡಿಯೂರಪ್ಪ (ಕೈದಿ ನಂಬರ್ - 10462),
ಎಂ ಎನ್ ಕೃಷ್ಣಯ್ಯ ಶೆಟ್ಟಿ (ಕೈದಿ ನಂಬರ್ - 10461),
ಕಟ್ಟಾ ಸುಬ್ರಮಣ್ಯ ನಾಯ್ದು (ಕೈದಿ ನಂಬರ್ - 7801),
ಕಟ್ಟಾ ಜಗದೀಶ್ (ಕೈದಿ ನಂಬರ್ - 7802).. ಪಟ್ಟಿ ಮುಂದುವರೆಯಲಿದೆ
ಮಾಜಿ ಟೆಲಿಕಾಂ ಸಚಿವ ಎ ರಾಜಾ, ಕಾಂಗ್ರೆಸ್ ಸಂಸದ ಸುರೇಶ್ ಕಲ್ಮಾಡಿ, ಡಿಎಂಕೆ ಸಂಸದೆ ಕನಿಮೋಳಿ ಮಾತ್ರ ತಿಹಾರ್ ಜೈಲಿನಲ್ಲಿದ್ದಾರೆ. ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಜಾಮೀನು ಪಡೆದು ಹೊರಬಿದ್ದಿದ್ದಾರೆ.
ಇತ್ತ ಪರಪ್ಪನ ಅಗ್ರಹಾರದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜೊತೆಗೆ ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಕೃಷ್ಣಯ್ಯ ಶೆಟ್ಟಿ ಇದ್ದಾರೆ. ಕಟ್ಟಾ ಕೂಡಾ ಚಿಕಿತ್ಸೆ ನೆಪದಲ್ಲಿ ಮುಂಬೈ ಆಸ್ಪತ್ರೆ ಸೇರಿದ್ದಾರೆ.
ಜೈಲಿನಲ್ಲಿ ಎಲ್ಲವೂ ಇದೆ: ಯಡಿಯೂರಪ್ಪ ಅವರ ರೂಮ್ ನಲ್ಲಿ ಅಟ್ಯಾಚ್ಡ್ ಶೌಚಾಲಯ, ಟಿವಿ, ಮಂಚ, ಹಾಸಿಗೆ, ಹೊದಿಕೆ ಎಲ್ಲವೂ ಇದೆ. ಗ್ರಂಥಾಲಯ, ಕ್ರೀಡೆಗೆ ಮೈದಾನ, ಆಸ್ಪತ್ರೆ ಅಲ್ಲದೆ ಸುಮಾರು 20ಕ್ಕೂ ಅಧಿಕ ಸಣ್ಣಪುಟ್ಟ ದೇವರ ಗುಡಿಗಳಿವೆ. ಪೂಜೆ ಮಾಡಿಕೊಡಲು ಬ್ರಾಹ್ಮಣ ಖೈದಿಗಳಿದ್ದಾರೆ. ದೀಪಾವಳಿ ಆಚರಣೆಗೆ ಏನು ಅಡ್ಡಿಯಿಲ್ಲ. ಒಬ್ಬರ ಮೇಲೊಬ್ಬರು ಬಾಂಬ್ ಎಸೆದಾಡದಿದ್ದರೆ ಆಯ್ತು.
ಬಿಹಾರವನ್ನು ನಾಚುವಂತೆ ಮಾಡಿದ ಕರ್ನಾಟಕ: ಭ್ರಷ್ಟ ರಾಜಕಾರಣಿಗಳ ವಿಷಯ ಬಂದರೆ ಬಿಹಾರ, ಉತ್ತರ ಪ್ರದೇಶದತ್ತ ಎಲ್ಲರೂ ಬೊಟ್ಟು ಮಾಡಿ ತೋರಿಸುತ್ತಿದ್ದರು. ಈಗ ಕರ್ನಾಟಕ ಹಗರಣಗಳ ತೊಟ್ಟಿಲಾಗಿದೆ.ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ 28 ಜನ ಸಚಿವರಲ್ಲಿ ಬಹುತೇಕ ಎಲ್ಲರೂ ಪರಪ್ಪನ ಅಗ್ರಹಾರದ ಕ್ಯಾಂಡಿಡೇಟ್ ಎಂದು ಹೇಳಲಾಗುತ್ತಿದೆ.
ಮುಂದಿನ ಎಂಟ್ರಿ ಯಾರು ಆಶೋಕ್ ಅಥವಾ ನಿರಾಣಿ...?












Click it and Unblock the Notifications