ಸಿಂಗಾಪುರದಲ್ಲಿ ಸೆಕ್ಸ್ ಎಸ್ಎಂಎಸ್ ಹಾವಳಿ ವಿಪರೀತ

ಏನಪಾ ಅಂತಂದರೆ ... ಮೊಬೈಲ್ ಮೂಲಕ ಎಸ್ಎಂಎಸ್/ ಎಂಎಂಎಸ್ ಕಳಿಸುವ ಇಲ್ಲಿನ ಯುವಕ/ಯುವತಿಯರು ತಮ್ಮ ದೇಹಸ ಯಾವುದೇ ಭಾಗಗಳ ನಗ್ನ ಚಿತ್ರಗಳನ್ನು ತೆಗೆದು ತಮ್ಮ ಪ್ರೀತಿಪಾತ್ರರಿಗೆ ಕಳಿಸುತ್ತಿದ್ದಾರೆ! ಇದು ಡೇಟಿಂಗ್ ಸಂಸ್ಕೃತಿ ಹೆಚ್ಚಾಗಿರುವ ಸಿಂಗಾಪುರದ ಸಂಸ್ಕೃತಿಗೆ ಮಾರಕವಾಗುತ್ತಿದೆ.
ಸರಕಾರಿ ಸೇವೆಯಲ್ಲಿರುವ ರಾಶೆಲ್ ಎಂಬ 25 ವರ್ಷದ ನವತರುಣಿ ಈ ಬಗ್ಗೆ 'ಡೇಟಿಂಗ್ ವೇದಿಕೆಯೊಂದರಲ್ಲಿ ಭೇಟಿಯಾಗಿದ್ದವನೊಬ್ಬ ಇಂತಹ ಮೆಸೇಜ್ ಕಳಿಸಿದಾನೆ ನೋಡ್ರಿ' ಎಂದು ಅಲವತ್ತುಕೊಂಡಿದ್ದಾಳೆ! ಮೊದಲು ಅವನು ಯಾವುದೋ ಅಶ್ಲೀಲ ಚಿತ್ರ ಕಳಿಸಿದ. ಸ್ವಲ್ಪ ಸಮಯದ ನಂತರ... ಇದೇ ರೀತಿ ನಿನ್ನ ಮೊಲೆಗಳ ಚಿತ್ರಗಳನ್ನೂ ಕಳಿಸಿಕೊಡು, ಪ್ಲೀಸ್ ಎಂದು ಬಲವಂತಪಡಿಸುತ್ತಿದ್ದಾನೆ ಎಂದು ರಾಶೆಲ್ ಗೋಳಾಡಿದ್ದಾಳೆ.
ಕಾನೂನು ಏನು ಹೇಳುತ್ತದೆ?
ಪೂರ್ವ ಒಪ್ಪಿಗೆಯೊಂದಿಗೆ ಯುವಕ/ಯುವತಿಯರು ಮಧ್ಯೆ ಇಂತಹ ಎಸ್ಎಂಎಸ್/ ಎಂಎಂಎಸ್ ಸರಿದಾಡಿದರೆ ಯಾರದೇ ಅಭ್ಯಂತರ ಇಲ್ಲ. ಆದರೆ...ಇದನ್ನು ತಪ್ಪಿ ನಡೆದರೆ ಅಪರಾಧ ಸಂಹಿತೆ ಸೆಕ್ಷನ್ 292ರ ಅನುಸಾರ ಅಪರಾಧವಾಗುತ್ತದೆ.
ಒಂದು ವೇಳೆ, ಪೂರ್ವ ಸಮ್ಮತಿಯೊಂದಿಗೆ ಇಂತಹ ಎಸ್ಎಂಎಸ್/ ಎಂಎಂಎಸ್ ಸರಿದಾಡಿದರೂ ಅಪರಾಧಾತ್ಮಕ ಚಿತ್ರಗಳನ್ನು ರವಾನಿಸಿದ ಆರೋಪ ಹೊರಬೇಕಾಗುತ್ತದೆ. ಅದರಲ್ಲೂ ದೇಹದ ಗುಪ್ತಾಂಗಗಳನ್ನು ಕಳಿಸತೊಡಗಿದರೆ ಕಾನೂನು ಸುಮ್ಮನಿರುವುದಿಲ್ಲ ಎಂದು ವಕೀಲರೊಬ್ಬರು ಹೇಳಿದ್ದಾರೆ.












Click it and Unblock the Notifications