ಅಮರ್ ಸಿಂಗ್ ಹೈಕೋರ್ಟ್ ನಿಂದ ದೀಪಾವಳಿ ಕೊಡುಗೆ

ದೆಹಲಿಯ ತೀಸ್ ಹಜಾರಿ ಕೋರ್ಟ್ ಈ ಆದೇಶ ನೀಡಿದ್ದು, ದೆಹಲಿ ಏಮ್ಸ್ ಅಧಿಕಾರಿಗಳು ನೀಡಿದ ವೈದ್ಯಕೀಯ ವರದಿ ಆಧಾರಿಸಿ ಜಾಮೀನು ಮಂಜೂರು ನೀಡಲಾಗಿದೆ.
ಮಾಜಿ ಸಮಾಜವಾದಿ ಪಕ್ಷದ ನಾಯಕ ಅವರು 1 ಕೋಟಿ ರು ಹಾಗೂ ಇಬ್ಬರ ಶ್ಯೂರಿಟಿ ಆಧಾರದ ಪಡೆದು ಜಾಮೀನು ಗಳಿಸಿದ್ದಾರೆ. ಅಮರ್ ಸಿಂಗ್ ಅವರ ವಿಚಾರಣೆ ನೋಡಲು ನಟಿ, ಸಮಾಜವಾದಿ ಪಕ್ಷದ ನಾಯಕಿ ಜಯಪ್ರದಾ ಅವರು ಬಂದಿದ್ದು ವಿಶೇಷವಾಗಿತ್ತು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಬಂಧಿತರಾಗಿದ್ದ ಅಮರ್ ಸಿಂಗ್ ಅವರು ತೀವ್ರವಾದ ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ವಿಟಮಿನ್ ಬಿ12 ಕೊರತೆ, ಕಿಡ್ನಿ ವೈಫಲ್ಯದ ಭಯವುಂಟಾದ್ದರಿಂದ ಕೂಡಲೇ ಸೂಕ್ತ ಚಿಕಿತ್ಸೆ ನೀಡಬೇಕು ಎಂದು All India Institute of Medical Sciences(AIIMS) ವೈದ್ಯರು ವರದಿ ನೀಡಿದ್ದರು.
ಅಮರ್ ಸಿಂಗ್ ಅವರಿಗೆ ಬೆಂಗಳೂರು ಅಥವಾ ಮುಂಬೈನಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸುವ ಸಾಧ್ಯತೆಯಿದೆ.












Click it and Unblock the Notifications