ಭ್ರಷ್ಟ ಪತ್ರಕರ್ತರ ಆಸ್ತಿ ತನಿಖೆಯಾಗಲಿ: ರೇಣುಕಾ

Minister Renukacharya
ಚಾಮರಾಜನಗರ, ಅ.23 : ನಮ್ಮ ನೆಚ್ಚಿನ ನಾಯಕ ಯಡಿಯೂರಪ್ಪ ಅವರ ಇಂದಿನ ದುಃಸ್ಥಿತಿಗೆ ಕೆಲ ಭ್ರಷ್ಟ ಪತ್ರಕರ್ತರು ಕಾರಣರಾಗಿದ್ದಾರೆ. ಜೈಲಿನಲ್ಲಿ ದೀಪಾವಳಿ ಆಚರಿಸುವ ಕಷ್ಟಕಾಲಕ್ಕೆ ದೂಡಿದ ಮಾಧ್ಯಮಗಳಿಗೆ ಶಿಕ್ಷೆಯಾಗಬೇಕು ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಕೆಲವು ಪತ್ರಕರ್ತರೂ ಕಡು ಭ್ರಷ್ಟರಾಗಿದ್ದು, ಕೋಟ್ಯಂತರ ರೂಪಾಯಿ ಆಸ್ತಿ ಗಳಿಸಿದ್ದು ಲೋಕಾಯುಕ್ತ ಸಂಸ್ಥೆ ಮುಂದೆ ಆಸ್ತಿ ಬಹಿರಂಗಪಡಿಸಿಕೊಳ್ಳಬೇಕು

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತೇಜೋವಧೆಯಲ್ಲಿ ತೊಡಗಿರುವ ಮಾಧ್ಯಮಗಳು ಹಾಗೂ ಅದರಲ್ಲಿರುವ ಪತ್ರಕರ್ತರು ಕೋಟ್ಯಾಂತರ ದುಡ್ಡು ಮಾಡಿದ್ದಾರೆ. ಮೊದಲು ಆಸ್ತಿ ಘೋಷಿಸಿ ನಂತರ ಆ ಸೀಟ್ ಮೇಲೆ ಕೂರಲಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗಗಳು ಸಮಾಜದಲ್ಲಿ ತಪ್ಪಿ ನಡೆದಾಗ ಅದನ್ನು ತಿದ್ದುವುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದ ಕರ್ತವ್ಯ.

ಆದರೆ ಇನ್ನೊಬ್ಬರಿಗೆ ನೀತಿ, ನಿಯಮ ಹೇಳುವ ಪತ್ರಕರ್ತರು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡುವುದು ಎಷ್ಟು ಸರಿ. ಮೊದಲಿಗೆ ತಾವು ಸರಿ ಇದ್ದೀವಾ ಎಂದು ನೋಡಿಕೊಳ್ಳಬೇಕು ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+