ಈ ಸೆಕ್ಸ್ ಕ್ಲಿನಿಕ್ ನಲ್ಲಿ ತೆರಿಗೆ ಅಧಿಕಾರಿಗಳಿಗೆ ಸಿಕ್ಕಿದ್ದೇನು?

ಸದರಿ ವೈದ್ಯರು ನಗರ ಪ್ರದೇಶದಲ್ಲಿ ಸೆಕ್ಸ್ ಕ್ಲಿನಿಕ್ ಹೊಂದಿದ್ದು, ರೈ ಮಾರ್ಕೆಟ್ ಕಚೇರಿ, ರಾಮ್‌ಭಾಗ್ ರಸ್ತೆ ಕಚೇರಿ ಮತ್ತು ಕಲಾ ಅಂಬ್‌ನಲ್ಲಿರುವ ವೈದ್ಯರ ಫ್ಯಾಕ್ಟರಿಗಳ ಮೇಲೂ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಮಮತಾ ಬನ್ಸಾಲ್ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, ಆದಾಯ ತೆರಿಗೆ ಅಧಿಕಾರಿಗಳು ನಗರದಲ್ಲಿ ಸಿಕ್ಕ ಸಿಕ್ಕ ಕಡೆಯೆಲ್ಲ ದಾಳಿ ನಡೆಸುತ್ತಿದ್ದಾರೆ ಎಂದು ಭೀತಿಗೊಳಗಾದ ಸ್ಥಳೀಯ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಕೊಂಡು ನಾಪತ್ತೆಯಾದರು ಎಂದು ತಿಳಿದುಬಂದಿದೆ.
ಸುಮಾರು ರೂ. 20 ಕೋಟಿ ಮೊತ್ತದ ಫಿಕ್ಸೆಡ್ ಡೆಪಾಸಿಟ್ ಸರ್ಟಿಫಿಕೇಟ್‌ಗಳನ್ನು ಪತ್ತೆ ಹಚ್ಚಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ವೈದ್ಯರ ಕಲಾ ಅಂಬ್ ಫ್ಯಾಕ್ಟರಿಯಲ್ಲಿ ಕಂಡುಬಂದಿರುವ ಅಕ್ರಮ ಆಸ್ತಿ ವ್ಯವಹಾರಗಳ ಕುರಿತು ಮಾಹಿತಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಎಲ್ಲ ಫಿಕ್ಸೆಡ್ ಡೆಪಾಸಿಟುಗಳನ್ನು ರೂ. 1 ಲಕ್ಷ ದಿಂದ ರೂ. 5 ಲಕ್ಷ ದವರೆಗಿನ ಸಣ್ಣ ಮೊತ್ತಗಳಾಗಿ ಪರಿವರ್ತಿಸಲಾಗಿದೆ. ವಿಷಯಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.












Click it and Unblock the Notifications