ಲೋಕಸೇವಕ ಡಾ.ಕೃಷ್ಣನೂ ಹೊರಟರು ಜಯದೇವ ಆಸ್ಪತ್ರೆಗೆ

ಆದರೆ, ಈ ಮಧ್ಯೆ ಅವರು ಜಾಮೀನಿಗಾಗಿ ವಿಫಲ ಪ್ರಯತ್ನಗಳು ನಡೆಸಿದ್ದಾರೆ. ಜಾಮೀನು ಸಿಗದಿರುವುದರಿಂದ ಬೇಸತ್ತ ಹಾಸನದ ನಮ್ಮೀ ಹಲ್ಲಿನ ಡಾಕ್ಟರು ಎದೆ ನೋವು ಎಂದು ಎದೆ ಹಿಡಿದುಕೊಂಡು ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇನ್ನು, ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬಷನರಿ ಹುದ್ದೆ ನೇಮಕಾತಿ ಅಕ್ರಮ ಸಂಬಂಧ ಸೆಷನ್ಸ್ ನ್ಯಾಯಾಲಯ ಗುರುವಾರವಷ್ಟೇ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ 'ಲೋಕ ಸೇವಕ' ಡಾ. ಕೃಷ್ಣ ಸಾಹೇಬರು ಜಾಮೀನು ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ.
ಡಾ. ಎಚ್.ಎನ್. ಕೃಷ್ಣ ಜಾಮೀನು ಕೋರಿ ಶುಕ್ರವಾರ ಹೈಕೋರ್ಟ್ ಕದ ತಟ್ಟಿದ್ದು, ಅರ್ಜಿ ವಿಚಾರಣೆ ಸೋಮವಾರ ನ್ಯಾ. ಬಿ.ವಿ. ಪಿಂಟೊ ಅವರ ಪೀಠದ ಎದುರು ಬರಲಿದೆ.












Click it and Unblock the Notifications