ಯಡಿಯೂರಪ್ಪ ನ್ಯಾಯಾಂಗ ಬಂಧನ: ನ. 3ರವೆರೆಗೆ ವಿಸ್ತರಣೆ

ಜೈಲು ಹಕ್ಕಿ 10462 ಅಲಿಯಾಸ್ ಯಡಿಯೂರಪ್ಪ ಮತ್ತು ಶಾಸಕ ಕೃಷ್ಣಯ್ಯ ಶೆಟ್ಟಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಶನಿವಾರ ವಿಸ್ತರಿಸಿರುವುದೇ ಇದಕ್ಕೆ ಕಾರಣವಾಗಿದೆ. ಇವರಿಬ್ಬರೂ ಅನುಕ್ರಮವಾಗಿ ಡಿನೋಟಿಫಿಕೇಷನ್ ಪ್ರಕರಣದ ಆರೋಪಿ ನಂಬರ್ 1 ಮತ್ತು ಆರೋಪಿ ನಂಬರ್ 2 ಆಗಿದ್ದು, ಅವರುಗಳ ನ್ಯಾಯಾಂಗ ಬಂಧನ ಅವಧಿಯನ್ನು ನವೆಂಬರ್ 3ರವೆರೆಗೆ ಕೋರ್ಟ್ ವಿಸ್ತರಿಸಿತು.
ಜತೆಗೆ ಪ್ರಕರಣದ ಸಹ ಆರೋಪಿಗಳಾದ ಯಡಿಯೂರಪ್ಪರ ಪುತ್ರರಾದ ಬಿ.ವೈ. ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್ ಕುಮರ್ ಮತ್ತು ಶಾಸಕ ಹೇಮಚಂದ್ರ ಸಾಗರ್ ಅವರು ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಆದರೆ ಅನಾರೋಗ್ಯದ ನೆಪವೊಡ್ಡಿ ಯಡಿಯೂರಪ್ಪ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರೆ ಶೆಟ್ಟಿ ಹಾಜರಾಗಿದ್ದರು. ಇದೇ ವೇಳೆ ಈ ಎಲ್ಲ ಆರೋಪಿಗಳ ಪಾಸ್ ಪೋರ್ಟ್ ಗಳನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡಿತು.
ಡಿನೋಟಿಫಿಕೇಷನ್ ಸಂಬಂಧ ಲೋಕಾಯುಕ್ತ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿಗೆ ಜಾಮೀನು ನಿರಾಕರಿಸಿ ಅ. 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು.












Click it and Unblock the Notifications