ಕೆಪಿಎಸ್ ಸಿ ಹಗರಣ: ಹೈಕೋರ್ಟಿಗೆ ಕೃಷ್ಣ ಮೊರೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇನ್ನೂ ಒಂದು ವಾರಗಳ ಕಾಲ ಕಳೆಯಬೇಕಿದ್ದ ಕೃಷ್ಣ ಅವರ ಪರ ಖ್ಯಾತ ವಕೀಲ ಸಿ ಎಚ್ ಹನುಮಂತರಾಯ ಅವರು ಅರ್ಜಿ ಸಲ್ಲಿಸಿದ್ದಾರೆ.
ಆರೋಪಿ ರಾಜಕೀಯ ಹಾಗೂ ಅಧಿಕಾರ ಪ್ರಭಾವ ಹೊಂದಿರುವುದರಿಂದ ಸಾಕ್ಷಿಗಳಿಗೆ ಬೆದರಿಕೆ ಹಾಕಿ ದಾಖಲೆಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದು ಸಿಐಡಿ ಪೊಲೀಸರ ಪರ ವಕೀಲರಾದ ಅರುಂಧತಿ ಕುಲಕರ್ಣಿ ವಾದಕ್ಕೆ ಸಮ್ಮತಿಸಿದ್ದ ನ್ಯಾಯಮೂರ್ತಿ ಕಿರಣ್ ಕಿಣಿ ಅವರು ಕೃಷ್ಣ ಅವರಿಗೆ ಜಾಮೀನು ನಿರಾಕರಿಸಿದ್ದರು.
ಕೃಷ್ಣ ಅವರ ಮೇಲಿರುವ ಆರೋಪ: ಕೆಪಿಎಸ್‌ಸಿ 1998, 1999 ಮತ್ತು 2004ರಲ್ಲಿ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ಹಾಗೂ ಅಭ್ಯರ್ಥಗೆ ಜೀವ ಬೆದರಿಕೆ ಆರೋಪ ಕೃಷ್ಣ ಅವರ ಮೇಲಿದೆ.
ಐಪಿಸಿ ಸೆಕ್ಷನ್ 417, 718, 465, 466, 468, 471, 506, 120-B ಅಡಿಯಲ್ಲಿ ಕೃಷ್ಣ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ












Click it and Unblock the Notifications