ಜೈಲಿನಲ್ಲೇ ಸುರುಸುರು ಬತ್ತಿ ಹತ್ತಿಸಲಿರುವ ಯಡ್ಡಿ

4,5ನೇ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಅವರು ಫಿರ್ಯಾದುದಾರರಾದ ಸಿರಾಜಿನ್ ಬಾಷಾ ಹಾಗೂ ಬಾಲರಾಜ್ ಅವರ ಹೇಳಿಕೆ ಪಡೆದರು. ನಂತರ ಮುಂದಿನ ವಿಚಾರಣೆಯನ್ನು ಅ.28ಕ್ಕೆ ಮುಂದೂಡಿದ್ದಾರೆ.
ಹೀಗಾಗಿ ದೀಪಾವಳಿ ಹಬ್ಬವನ್ನು ಪರಪ್ಪನ ಅಗ್ರಹಾರದಲ್ಲಿ ಸಹ ಖೈದಿಗಳ ಜೊತೆಯಲ್ಲೇ ಆಚರಿಸುವ ಭಾಗ್ಯ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಿಕ್ಕಿದೆ.
ಈ ನಡುವೆ ಹೈಕೋರ್ಟ್ ನಲ್ಲಿ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ಮುಂದುವರೆದಿದ್ದು, ಯಡಿಯೂರಪ್ಪ ಅವರ ಪರ ಹಿರಿಯ ವಕೀಲ ಲಲಿತ್ ಅವರು ವಾದ ಮಂಡಿಸಿದ್ದಾರೆ. ಸಿರಾಜಿನ್ ಬಾಷಾ ವಿರುದ್ಧ ಸಿಎಚ್ ಸಿರಾಜಿನ್ ಬಾಷಾ ಅವರು ವಾದಿಸುತ್ತಿದ್ದಾರೆ. ಸಂಜೆ ವೇಳೆಗೆ ಯಡಿಯೂರಪ್ಪ ಅವರಿಗೆ ಜೈಲಾ? ಅಥವಾ ಬೇಲಾ? ಗೊತ್ತಾಗಲಿದೆ.












Click it and Unblock the Notifications