ಯಡಿಯೂರಪ್ಪನಿಗಾಗಿ ಉಳ್ಳಾಲದಲ್ಲಿ ಉರುಳು ಸೇವೆ

ಮಂಗಳವಾರ ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡಿ ದೇವಾಲಯದಲ್ಲಿ ಉರುಳು ಸೇವೆ ಮಾಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅತೀ ಶೀಘ್ರವಾಗಿ ಜೈಲಿನಿಂದ ಬಿಡುಗಡೆಯಾಗಲೆಂದು ಪ್ರಾರ್ಥಿಸಿದ್ದಾರೆ.
ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಸದಾನಂದ ಬಂಗೇರ ಅವರ ಸಾರಥ್ಯದಲ್ಲಿ ಉರುಳು ಸೇವೆ ಮಾಡಲಾಯಿತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ದೇವಸ್ಥಾನದ ಅಭಿವೃದ್ದಿಗೆ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು ಎನ್ನುವುದನ್ನು ಸದಾನಂದ ಬಂಗೇರ ನೆನಪಿಸಿದ್ದಾರೆ. ಮೀನುಗಾರಿಕೆ ಮಾಡುವ ದೋಣಿಗಳಿಗೆ ಡೀಸೆಲ್ ಸಬ್ಸಿಡಿ ಬಿಡುಗಡೆ ಮಾಡುವಲ್ಲೂ ಯಡಿಯೂರಪ್ಪ ಅವರು ಮುತುವರ್ಜಿ ವಹಿಸಿದ್ದರು ಎನ್ನುವುದು ಇವರ ಅಂಬೋಣ.
ಉರುಳು ಸೇವೆ ಮಾಡಿದವರ ಮನದಾಳದ ಮಾತುಗಳೆಂದರೆ ಯಡಿಯೂರಪ್ಪ ಅವರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಿ ಜೈಲಿಗೆ ಅಟ್ಟಲಾಗಿದೆ. ಯಡಿಯೂರಪ್ಪನವರ ಬಿಡುಗಡೆಗಾಗಿ ನಮ್ಮ ಪ್ರಾರ್ಥನೆ ಎನ್ನುತ್ತಾರೆ. ಉಳ್ಳಾಲದ ಉರುಳು ಸೇವೆಯಿಂದ ಪ್ರೇರಣೆಯಾಗಿ ನಾಳೆಯಿಂದ ಎಲ್ಲೆಲ್ಲಿ ಉರುಳು ಸೇವೆ ನಡೆಯುವುದೋ ಕಾದುನೋಡಬೇಕು.












Click it and Unblock the Notifications