ಮಂಗಳೂರು ಮಸಾಜ್ ಪಾರ್ಲರ್ ತುಂಬಾ ವೇಶ್ಯಾವಾಟಿಕೆ

ನಗರದ ಕಂಕನಾಡಿ, ಫಳೀರ್‌ನಲ್ಲಿ ಚೈತನ್ಯ ಆಯುರ್ವೇದಿಕ್, ನಂತೂರಿನ ಅಮೃತ ನಿಸರ್ಗ ಆಯುರ್ವೇದಿಕ್ ಮತ್ತು ಬಲ್ಮಠದಸೋಲಸ್ ಫ್ಯಾಮಿಲಿ ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಲಾಗಿದೆ. ಒಟ್ಟು 11 ಜನರನ್ನು ಬಂಧಿಸಲಾಗಿದೆ.
ಆಯುರ್ವೇದಿಕ್ ಚಿಕಿತ್ಸೆ ನೆಪ: ಹುಡುಗಿಯರನ್ನು ಕೆಲಸದ ಹೆಸರಲ್ಲಿ ಅನೈತಿಕ ದಂಧೆಗೆ ಬಳಸಿಕೊಳ್ಳುತ್ತಿದೆ ಎಂಬ ದೂರು ಕೇಳಿ ಬಂದಿತು. ಗಿರಾಕಿಗಳಿಗೆ ಆಯುರ್ವೇದಿಕ್ ಚಿಕಿತ್ಸೆ ಹೆಸರಿನಲ್ಲಿ ಹುಡುಗಿಯರನ್ನು ಪೂರೈಕೆ ಮಾಡಲಾಗುತ್ತಿದೆ ಎಂಬ ಅರೋಪಗಳು ಮಾಡಲಾಗಿತ್ತು.
ಸಿಕ್ಕಿಬಿದ್ದ ಮಂಗಳೂರು, ಮೂಡಬಿದ್ರೆ ಮತ್ತು ಬಂಟ್ವಾಳದ ನಿರುದ್ಯೋಗಿ ಯುವತಿಯರು ಸೇರಿದ್ದಾರೆ. ಊಟ, ವಸತಿ, ಕೈತುಂಬ ಸಂಬಳ ಸಿಗುವ ಆಸೆಯಿಂದ ಈ ಕೆಲಸಕ್ಕೆ ಸೇರುವ ಹುಡುಗಿಯರು ಈಗ ಕಂಗಾಲಾಗಿದ್ದಾರೆ.
ಯುವತಿಯರ ವಿರುದ್ಧ ಕೇಸು ಜಡಿಯುವ ಬದಲು ಕೌನ್ಸೆಲಿಂಗ್ ನಡೆಸಿ ಕೆಲಸ ಕೊಡಿಸುವ ಪ್ರಯತ್ನ ಮಾಡಬಾರದು ಎಂಬ ಕೂಗು ಎದ್ದಿದೆ.
ಈ ನಡುವೆ ಎಸಿಪಿ ರವೀಂದ್ರ ಗಡದಿ ನೇತೃತ್ವದಲ್ಲಿ ಉರ್ವಠಾಣಾ ವ್ಯಾಪ್ತಿಯ ವಸತಿ ಗೃಹವೊಂದರ ಮೇಲೆ ಕೂಡಾ ದಾಳಿ ನಡೆದಿದೆ.
ಪೊಲೀಸರು ಕ್ರಮ ಕೈಗೊಳ್ಳದಿದ್ದಲ್ಲಿ ತಾವೇ ದಾಳಿ ಮಾಡುತ್ತೇವೆ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ ನಂತರ ಪೊಲೀಸರು ಈ ದಾಳಿ ನಡೆಸಿದ್ದಾರೆ.












Click it and Unblock the Notifications