ಗೃಹ ಸಚಿವ ಅಶೋಕ್ ಮೇಲೆ 420 ಕೇಸ್ ಡೀಟೈಲ್

ಫಿರ್ಯಾದುದಾರ ಎಂ.ಮಂಜುನಾಥ್ ಅವರು ಲೋಕಾಯುಕ್ತ 23ನೆ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶ ಸಿ.ಬಿ.ಹಿಪ್ಪರಗಿ ಅವರಿಗೆ ಈ ಹಿಂದೆ ನೀಡಿದ್ದ ಹೇಳಿಕೆ ಪ್ರತಿ ಪ್ರಕಾರ ಕಥೆ ಈ ಕೆಳಗಿನಂತಿದೆ:
* ರಾಜ್‌ಮಹಲ್ ವಿಲಾಸ್ ಬಡಾವಣೆ ನಿರ್ಮಾಣಕ್ಕಾಗಿ ಸರ್ವೇ ನಂಬರ್ 10/1 ಮತ್ತು 10/11ಎಫ್‌ಗೆ ಸೇರಿದ 24ಗುಂಟೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು 1978ರಲ್ಲಿ ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿತ್ತು.
* 1988ರಲ್ಲಿ ಸದರಿ ಜಾಗವನ್ನು ಬಿಡಿಎ ಸ್ವಾಧೀನಕ್ಕೆ ಪಡೆಯಿತು ಎಂಬ ಫಿರ್ಯಾದುದಾರರ ಹೇಳಿಕೆಯನ್ನು ಅವರು ದಾಖಲಿಸಿಕೊಂಡರು.
* ಭೂಮಿಯ ಹಿಂದಿನ ಮಾಲೀಕರಾದ ಕೃಷ್ಣಪ್ಪ, ರಾಮಸ್ವಾಮಿ, ಗೋವಿಂದಪ್ಪ ಸೇರಿದಂತೆ 14 ಮಂದಿ ಸಚಿವ ಆರ್.ಅಶೋಕ್‌ರಿಗೆ 2003 ಮತ್ತು 2007ರಲ್ಲಿ ಎರಡು ಬಾರಿ ಇದೇ 24 ಗುಂಟೆ ಪ್ರದೇಶವನ್ನು ಪ್ರತ್ಯೇಕವಾಗಿ ಮಾರಾಟ ಮಾಡಿ, ನೋಂದಣಿ ಕೂಡ ಮಾಡಿಕೊಟ್ಟಿದ್ದಾರೆ.
* ಬಿಡಿಎ ಅಧೀನದಲ್ಲಿದ್ದ ಸರ್ಕಾರದ ಭೂಮಿಯನ್ನು ಕಾನೂನು ಬಾಹಿರವಾಗಿ ಬೆಂಗಳೂರು ನಗರ ಉತ್ತರ ತಾಲೂಕಿನ ಇಬ್ಬರು ಉಪ ನೋಂದಣಾಧಿಕಾರಿಗಳು ಸಚಿವರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ.
* 2009ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವ ಆರ್.ಅಶೋಕ್ ಈ ಪ್ರದೇಶವನ್ನು ತಮ್ಮ ಪ್ರಭಾವ ಬೀರಿ ಡಿನೋಟಿಫೈ ಮಾಡಿಕೊಂಡಿದ್ದಾರೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಸುಮಾರು 25 ಕೋಟಿ ರೂ.ಗಳ ನಷ್ಟವಾಗಿದೆ.
* ಐಪಿಸಿ ಕಾಯ್ದೆ ಸೆ.406, 420, 120ರ ಪ್ರಕಾರ ಮತ್ತು ರಾಜ್ಯ ಭೂ ಸ್ವಾಧೀನ ಮತ್ತು ಕರ್ನಾಟಕ ಲ್ಯಾಂಡ್ ರಿಸ್ಟ್ರಿಕ್ಷನ್ ಕಾಯಿದೆ ಪ್ರಕಾರ ಮೇಲಿನ ಎಲ್ಲ ಆರೋಪಗಳು ಶಿಕ್ಷಾರ್ಹ ಅಪರಾಧವಾಗಿದೆ.
* ಕಾನೂನು ಬಾಹಿರವಾಗಿ ಆರ್.ಅಶೋಕ್ ಭೂಮಿಯನ್ನು ಡಿನೋಟಿಫೈ ಮಾಡಿಸಿಕೊಂಡು ದೊಡ್ಡ ಮೊತ್ತದ ಲಾಭ ಪಡೆದಿದ್ದಾರೆ. ಪ್ರಕರಣದ ಎಲ್ಲ ಮಾಹಿತಿಗಳು ಮಾಹಿತಿ ಹಕ್ಕು ಕಾಯ್ದೆಯಡಿ ಸಂಪಾದಿಸಿ ಕೋರ್ಟ್ ಗೆ ನೀಡಲಾಗಿದೆ.
ಆಮೇಲೆ ಕೇಸ್ ಏನಾಯ್ತು ಹಳ್ಳ ಹಿಡಿಯಿತು. ಈಗ ಮತ್ತೆ ಹಿರೇಮಠ್ ಎಂಬುವರು ಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದರಿಂದ ಇನ್ನಷ್ಟು ಹಳೆ ಕೇಸ್ ಗಳು ಜೀವ ಪಡೆಯಬಹುದು.












Click it and Unblock the Notifications