ಸತ್ತರೂ ಪರವಾಗಿಲ್ಲ ಜೈಲಿಗೆ ಹೋಗುತ್ತೇನೆ; ಹೇಡಿಯಂತೆ ಆಸ್ಪತ್ರೆಯಲ್ಲಿ ಇರುವುದಿಲ್ಲ: ಯಡಿಯೂರಪ್ಪ

ಇದೀಗ ಬಂದ ಸುದ್ದಿಯಂತೆ 'ಯಡಿಯೂರಪ್ಪ ಅವರು ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ವಾಪಸಾಗಲು ಸಿದ್ಧತೆ ನಡೆಸಿದ್ದಾರೆ' ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.
'ಅಲ್ಲ. 30 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಹೋರಾಟಕ್ಕೆ ಈ ಮಾಧ್ಯಮಗಳು ಮಸಿ ಬಳಿಯುತ್ತಿವೆಯಲ್ಲ!? ನಾನೇನು ಅಂಥ ತಪ್ಪು ಮಾಡಿದ್ದೇನೆ, ಹೇಳಿ ಯೋಗೀಶ್ವರ್' ಎಂದು ಬೆಳ್ಳಂಬೆಳಗ್ಗೆ ತಮ್ಮನ್ನು ಭೇಟಿಮಾಡಲು ಬಂದಿದ್ದ ಸಚಿವ ಯೋಗೀಶ್ವರ್ ಮುಂದೆ ಯಡಿಯೂರಪ್ಪ ಅವರು 'ಅರಣ್ಯ' ನ್ಯಾಯ ಕೇಳಿದ್ದಾರೆ.
'ನೋಡ್ತಿರಿ. ಏನೇನ್ ಮಾಡ್ತೀನಿ ಅಂತ. ಒಂದು ಚಿಕ್ಕ ಕ್ರೋಸಿನ್ ಮಾತ್ರೆ ಸಹ ತಗೊಳ್ಳೊಲ್ಲ ಇನ್ನು. ತಕ್ಷಣ ಹೊರಟಿದ್ದೀನಿ ಪರಪ್ಪನ ಅಗ್ರಹಾರ ಜೈಲಿಗೆ. ಸತ್ತರೇ ಅಲ್ಲೇ ಸಾಯುವೆ; ಹೇಡಿಯಂತೆ ಆಸ್ಪತ್ರೆಯಲ್ಲಿ ಇರುವುದಿಲ್ಲ' ಎಂದು ಯಡಿಯೂರಪ್ಪ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನನಗೇನೂ ಖಯಾಲಿಯಿಲ್ಲ, ಒಂಚೂರು ಖಾಯಿಲೆಯಿದೆ. ಅದಕ್ಕೆ ವೈದ್ಯರೇ ಆಸ್ಪತ್ರೆಯಲ್ಲಿರಿ ಎಂದು ವೈದ್ಯ ಸಲಹೆ ನೀಡಿರುವುದರಿಂದ ಆಸ್ಪತ್ರೆಯಲ್ಲಿದ್ದೇನೆ ಅಷ್ಟೇ ಎಂದು ಯೋಗೀಶ್ವರ್ ಮುಂದೆ ಬಿಎಸ್ ವೈ ದುಃಖ ತೋಡಿಕೊಂಡಿದ್ದಾರೆ.












Click it and Unblock the Notifications