ಪರಪ್ಪನ ಅಗ್ರಹಾರಕ್ಕೆ ಬಂದ್ರೆ ಜಯಲಲಿತಾಗೆ ಎನ್ಎಸ್ ಜಿ ರಕ್ಷೆ

ಆದರೆ, ತಮಿಳು ನಾಡು ಸಿಎಂ ಅವರ ಕೋರಿಕೆ ಮೇರೆಗೆ ಕರ್ನಾಟಕ ಸರ್ಕಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ನ್ಯಾಯಾಲಯವನ್ನು ರೂಪಿಸಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಿಎಂ ಸದಾನಂದ ಗೌಡರು ಹೇಳಿದ್ದಾರೆ.
ಈ ನಡುವೆ ಬೆಂಗಳೂರಿನ ಕೋರ್ಟ್ ವಿಚಾರಣೆ ಹಾಜರಾತಿ ವಿನಾಯತಿ ಕೋರಿ ಸುಪ್ರೀಂಕೋರ್ಟ್ ಗೆ ಜಯಲಲಿತಾ ಪರ ವಕೀಲರು ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಂತರ, ನ್ಯಾಯಾಲಯಕ್ಕೆ ಜಯಲಲಿತಾ ಅವರು ಖುದ್ದು ಹಾಜರಾಗಲೇಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಹೀಗಾಗಿ ಎನ್ ಎಸ್ ಜಿ ಕಮ್ಯಾಂಡೋ ಪಡೆ ಕರೆಸಿಕೊಂಡು ಸೂಕ್ತ ಭದ್ರತೆ ಒದಗಿಸಿದರೆ ಮಾತ್ರ ನ್ಯಾಯಾಲಯಕ್ಕೆ ಬರುವುದಾಗಿ ಜಯಾ ಪರ ವಕೀಲರು ಕರ್ನಾಟಕ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ. ಎನ್ ಎಸ್ ಜಿ ಸಿಬ್ಬಂದಿ ರಕ್ಷಣೆ ಸಿಕ್ಕರೆ ಜಯಾ ಅವರು ಕೋರ್ಟ್ ಗೆ ಹಾಜರಾಗಲಿದ್ದಾರೆ.
ಯಾವುದಿದು ಕೇಸ್?: 1991-96 ರ ಅವಧಿಯಲ್ಲಿ ಅಕ್ರಮವಾಗಿ 66 ಕೋಟಿ ರೂ. ಗಳಿಸಿದ ಆರೋಪವನ್ನು ಜಯಲಲಿತಾ ಅವರ ಮೇಲೆ ಹೊರೆಸಲಾಗಿದೆ. ವಿಚಾರಣೆಗೆ ಈವರೆಗೂ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವ ಜಯಲಲಿತಾ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಕೂಡಾ ಒಮ್ಮೆ ಕೋರಿದ್ದರು.












Click it and Unblock the Notifications