ಆಸ್ಪತ್ರೆಯಲ್ಲಿ ಯಡ್ಡಿಯೂರಪ್ಪ ಯೋಗಕ್ಷೇಮ ವಿಚಾರಿಸಿದ ಶಿವಕುಮಾರ ಸ್ವಾಮೀಜಿ

ಸುಮಾರು ಅರ್ಧ ಗಂಟೆ ಕಾಲ ತುಮಕೂರು ಸಿದ್ದಗಂಗಾ ಮಠದ ಶ್ರೀಗಳು ಯಡ್ಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಶೀಘ್ರ ಗುಣಮುಖರಾಗುವಂತೆ ಯಡ್ಡಿಯೂರಪ್ಪಗೆ ಹಾರೈಸಿದರು. ಸಚಿವ ವಿ. ಸೋಮಣ್ಣ ಸಿದ್ದಗಂಗಾ ಶ್ರೀಗಳ ಜತೆ ಆಸ್ಪತ್ರೆಗೆ ಆಗಮಿಸಿದ್ದು, ಮಾಜಿ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿದರು.
ನ್ಯಾ. ಪಿಂಟೋ ಕೈಯಲ್ಲಿ ಯಡಿಯೂರಪ್ಪ ಭವಿಷ್ಯ:
ಅಕ್ರಮ ಭೂ ಡಿನೋಟಿಫಿಕೇಷನ್, ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ, ಅಕ್ರಮ ಆಸ್ತಿ ಸಂಪಾದನೆ ಮತ್ತು ಸ್ವಜನ ಪಕ್ಷಪಾತ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಯಡಿಯೂರಪ್ಪ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಭೂ ಹಗರಣದ ಸಂಬಂಧ ತಮ್ಮ ಜಾಮೀನು ಅರ್ಜಿಯನ್ನು ವಜಾಗೊಳಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಯಡಿಯೂರಪ್ಪ ಜಾಮೀನು ಕೋರಿ ಹೈಕೋರ್ಟ್‌ಗೆ ಸೋಮವಾರ ಮೇಲ್ಮನವಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆ ನಾಳೆ ನ್ಯಾಯಮೂರ್ತಿ ಬಿ.ವಿ. ಪಿಂಟೋ ಅವರ ಏಕ ಸದಸ್ಯ ಪೀಠದ ಮುಂದೆ ಬರಲಿದೆ.












Click it and Unblock the Notifications