ದೇವೇಗೌಡರನ್ನು ಅಡ್ವಾಣಿ ಬೆಸ್ಟ್ ಎಂದಿದ್ದು ಏಕೆ?

HD Deve Gowda
ನಾಗಪುರ, ಅ.18: ಭ್ರಷ್ಟಾಚಾರ ವಿರುದ್ಧದ ಜನ ಚೇತನ ಯಾತ್ರೆ ಇನ್ನೂ ಕರ್ನಾಟಕದ ನೆಲ ಮುಟ್ಟಿಲ್ಲ. ಆದರೆ, ಎಲ್ ಕೆ ಅಡ್ವಾಣಿ ಅವರು ಮನಮೋಹನ್ ಸಿಂಗ್ ಆಡಳಿತಕ್ಕಿಂತ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರೇ ಬೆಸ್ಟ್ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ.

ಬಹುಮತ ಪಡೆದು ಪ್ರಧಾನಿ ಮನಮೋಹನಸಿಂಗ್‌ ಅವರು ಆಡಳಿತ ನಡೆಸುವುದಕ್ಕಿಂತ ಕೆಲವೇ ಕೆಲವು ಸಂಸದರ ಬಲ ಹೊಂದಿದ್ದ ಎಚ್ ಡಿ ದೇವೇಗೌಡರು ಉತ್ತಮ ಆಡಳಿತ ನೀಡಿದ್ದರು.

ಮನಮೋಹನ್ ಸಿಂಗ್ ಸರ್ಕಾರಕ್ಕೆ ಹೋಲಿಸಿದರೆ ಎಚ್‌.ಡಿ. ದೇವೇಗೌಡ, ಐ.ಕೆ. ಗುಜ್ರಾಲ್‌ ಹಾಗೂ ಚಂದ್ರಶೇಖರ್‌ ಅವರೇ ಉತ್ತಮವಾಗಿ ಕಾರ್ಯನಿರ್ವಹಿಸಿದರು ಎಂದು ಎಲ್‌.ಕೆ. ಅಡ್ವಾಣಿ ಹೇಳಿದ್ದಾರೆ.

ಪ್ರಧಾನಿ ಮನಮೋಹನಸಿಂಗ್‌ ಅವರ ಪ್ರತಿ ನಡೆಯ ಹಿಂದೆ 'ನಂ. 10 ಜನಪಥ್‌' (ಸೋನಿಯಾ ಗಾಂಧಿ ನಿವಾಸ)ಸೂಚನೆ ಇರುತ್ತದೆ.

2009ರ ಲೋಕಸಭಾ ಚುನಾವಣೆ ವೇಳೆ ಮತ್ತೆ ಅಧಿಕಾರಕ್ಕೆ ಬಂದರೆ ಕೇವಲ 100 ದಿನದಲ್ಲಿ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣವನ್ನು ವಾಪಸ್‌ ತರುವುದಾಗಿ ಮನಮೋಹನಸಿಂಗ್‌ ಭರವಸೆ ನೀಡಿದ್ದರು.

ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದಿದ್ದರೂ ಆ ಭರವಸೆಯನ್ನು ಅವರು ಈಡೇರಿಸಿಲ್ಲ ಎಂದು ಅಡ್ವಾಣಿ ಹೇಳಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಜೆಡಿಎಸ್ ಎಚ್ ಡಿ ದೇವೇಗೌಡ ಅವರು ಅಂದಿನಿಂದ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಕರ್ನಾಟಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಂಧನದಿಂದ ಜನ ಚೇತನ ಯಾತ್ರೆಗೆ ಯಾವುದೇ ಧಕ್ಕೆ ಇಲ್ಲ. ಅದು ಕಾನೂನು ಸಮರ, ಇದು ಭ್ರಷ್ಟರ ವಿರುದ್ಧ ಸಮರ ಎಂದು ಅಡ್ವಾಣಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+