ಹರ್ಯಾಣದಲ್ಲಿ ಅಣ್ಣಾ ಎಫೆಕ್ಟ್, ನೆಲಕಚ್ಚಿದ ಕಾಂಗ್ರೆಸ್

ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದು ಅಣ್ಣಾ ಹಜಾರೆ ಹೇಳಿದ ಮಾತಿನ ಪರಿಣಾಮ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟು, ಭಾರಿ ಮುಖಭಂಗ ಅನುಭವಿಸಿದೆ.
ಸುಮಾರು 23,617 ಮತಗಳ ಅಂತರದಿಂದ ಜಯಗಳಿಸಿದ ಕುಲದೀಪ್ ಬಿಷ್ಣೋಯ್ ಅವರು ಅಣ್ಣಾ ಅವರ ಚಳವಳಿಯನ್ನು ಗೌರವಿಸುವೆ. ಅವರ ಆಶಯದಂತೆ ಜನ ಲೋಕಪಾಲ್ ಮಸೂದೆಗೆ ಬೆಂಬಲ ನೀಡುವೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ದಿವಂಗತ ಭಜನ್ ಲಾಲ್ ಅವರ ಪುತ್ರ ಕುಲದೀಪ್ ವಿಜಯದ ಕೇಕೆ ಸದ್ದು ದೆಹಲಿಯ ಕಾಂಗ್ರೆಸ್ ದೊರೆಗಳ ಕಿವಿಗೆ ನಗಾರಿ ಸದ್ದಿನಂತೆ ಕೇಳಿಸುತ್ತಿದೆ. ಅಣ್ಣಾ ಟೀಂ vs ಕಾಂಗ್ರೆಸ್ ಎಂದೇ ಪ್ರಚಾರಗೊಂಡಿದ್ದ ಹಿಸಾರ್ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ನಂತರ ಕಾಂಗ್ರೆಸ್ ಕಾರಣಗಳ ಹುಡುಕಾಟದಲ್ಲಿದೆ.
'ಈ ಗೆಲುವು ಕಾಂಗ್ರೆಸ್ ಗೆ ತಕ್ಕ ಪಾಠವಾಗಲಿ, ಜನ ಲೋಕಪಾಲ ಮಸೂದೆ ಮಂಡನೆಯಾಗುವವರೆಗೂ ಕಾಂಗ್ರೆಸ್ ವಿರೋಧಿ ಚಳವಳಿಯನ್ನು ಅಣ್ಣಾ ಟೀಂ ಮುಂದುವರೆಸುತ್ತದೆ' ಎಂದು ಟೀಂ ಅಣ್ಣಾ ಪ್ರಮುಖ ಸದಸ್ಯ ಅರವಿಂದ್ ಕೇಜ್ರಿವಾಲ ಪ್ರತಿಕ್ರಿಯಿಸಿದ್ದಾರೆ












Click it and Unblock the Notifications