ಮೋದಿ ವಿರೋಧಿ ಸಂಜೀವ್ ಭಟ್ ಗೆ ಕೊನೆಗೂ ಸಿಕ್ತು ಜಾಮೀನು
ಅಹಮದಾಬಾದ್,
ಅ.17: ಮಹತ್ವದ ಬೆಳವಣಿಗೆಯೊಂದರಲ್ಲಿ ಮೋದಿ ವಿರೋಧಿ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಗೆ ಸೆಷನ್ಸ್ ನ್ಯಾಯಾಧೀಶ ವಿ ಕೆ ವ್ಯಾಸ್ ಸೋಮವಾರ ಜಾಮೀನು ನೀಡಿದ್ದಾರೆ. ಗುಜರಾತಿನಲ್ಲಿ 2002 ರಲ್ಲಿ ನಡೆದ ಹತ್ಯಾಕಾಂಡದಲ್ಲಿ ಮುಖ್ಯಮಂತ್ರಿಯ ಪಾತ್ರವನ್ನು ಬಯಲಿಗೆಳೆದು ನರೇಂದ್ರ ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಬಂಧನಕ್ಕೊಳಗಾಗಿದ್ದರು. id="toptextpromo">ಸುಪ್ರೀಂಕೋರ್ಟಿನಲ್ಲಿ
ಗುಜರಾತ್ ಮುಖ್ಯಮಂತ್ರಿ ವಿರುದ್ಧ ಸುಳ್ಳು ಅಫಿಟವಿಟ್ ಸಲ್ಲಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ, ಜೈಲಿಗಟ್ಟಿದ್ದರು. ಈಗ ಭಟ್ ಗೆ ಜಾಮೀನು ದೊರೆತಿರುವುದರಿಂದ ಹತ್ಯಾಕಾಂಡ ನಡೆದ ಬಳಿಕ ಒಂದು ದಶಕದಿಂದ ಮುಖ್ಯಮಂತ್ರಿ ಗಾದಿಯಲ್ಲಿ ವಿರಾಜಮಾನರಾಗಿರುವ ನರೇಂದ್ರ ಮೋದಿಗೆ ತೀವ್ರ ಹಿನ್ನಡೆಯಾಗಿದೆ. id='are-slot-1' class='oiad oi-axt oiadv'> id='top-searched-articles'>ರಾಜ್ಯದ
ಐಪಿಎಸ್ ಒಕ್ಕೂಟವು ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಬಂಧನದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಭಟ್ 17 ದಿನಗಳ ಸೆರೆವಾಸದ ನಂತರ ಸಬರಮತಿ ಜೈಲಿನಿಂದ ಇದೀಗತಾನೆ ಬಿಡುಗಡೆಗೊಂಡಿದ್ದಾರೆ.











Click it and Unblock the Notifications