ಹೆತ್ತಮ್ಮನನ್ನೇ 17 ಬಾರಿ ಕೊಚ್ಚಿ ಕೊಂದ ಟೆಕ್ಕಿ

ಪಿತ್ರಾರ್ಜಿತ ಆಸ್ತಿಯಿಂದ ಬಂದಿದ್ದ ದುಡ್ಡು ಸಿಗದ ಕಾರಣ ಟೆಕ್ಕಿ ಸಂದೀಪ್ ಪಟೇಲ್ ತಮ್ಮ ತಾಯಿ ಚಂಪಾಬೇನ್ ಅವರನ್ನು ಕೊಂದಿದ್ದಾರೆ ಎನ್ನಲಾಗಿದೆ.
ಪೂರ್ವಿಕರ ಆಸ್ತಿ ಪಾಸ್ತಿ ಮಾರಿ ಬಂದಿದ್ದ ಅಷ್ಟು ಹಣವನ್ನು ನನಗೆ ನೀಡಬೇಕು ಎಂದು ಸಂದೀಪ್ ಡಿಮ್ಯಾಂಡ್ ಮಾಡಿದ್ದಾನೆ. ಇದಕ್ಕೆ ಒಪ್ಪದ ತನ್ನ ತಾಯಿ ನೆಲಕ್ಕೆ ಕೆಡವಿ ಹೊಟ್ಟೆ, ಎದೆ, ಕುತ್ತಿಗೆ ಭಾಗದ ಮೇಲೆ ಒಟ್ಟು 17 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಕೋಪಕ್ಕೆ ತುತ್ತಾಗಿ ಮೂಗು ಕೊಯ್ದುಕೊಂಡು ನಂತರ ಅತ್ತ ಹಾಗೆ ಸಂದೀಪ್ ಕೂಡಾ ಪೊಲೀಸರನ್ನು ಕಂಡ ಮೇಲೆ ಗೋಳೋ ಎಂದು ಅತ್ತು ಕರೆದು ತಪ್ಪೊಪ್ಪಿಕೊಂಡಿದ್ದಾನೆ.
ಟೆಕ್ಕಿ ಸಂದೀಪ್ ಕೆಲಸ ಕಳೆದುಕೊಂಡಿದ್ದ ಪಾಕೇಟ್ ಮನಿ ಬೇಕು ಎಂದು ಪೋಷಕರನ್ನು ಪೀಡಿಸುತ್ತಿದ್ದ, ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದ ಸಂದೀಪ್ ಪಾಸ್ ಪೋರ್ಟ್ ಅನ್ನು ಅವರ ತಾಯಿ ಕಿತ್ತುಕೊಂಡಿದ್ದರು. ಅವರ ದುಬಾರಿ ಜೀವನಕ್ಕೆ ಚಿಕ್ಕಾಸು ನೀಡಿರಲಿಲ್ಲ ಎಂದು ಹತ್ತಿರದ ಸಂಬಂಧಿಕರು ಹೇಳಿದ್ದಾರೆ.












Click it and Unblock the Notifications