ನಾಣ್ಯ ಸಿಕ್ಕ ಮೇಲೆ ಸದಾ ಸರ್ವದಾ ಹಸನ್ಮುಖಿ

1994ರ ಚುನಾವಣಾ ಪ್ರಚಾರದಲ್ಲಿದ್ದ ಸಂದರ್ಭದಲ್ಲಿ ಮುಳಿಯದ ಶ್ಯಾಮ್ ಭಟ್ ಬೆಳ್ಳಿಯ ನಾಣ್ಯವೊಂದನ್ನು ನೀಡಿ ಯಾವಾಗಲೂ ನಿಮ್ಮ ಬಳಿಯೇ ಇಟ್ಟುಕೊಳ್ಳಿ ಒಳ್ಳೆಯದಾಗುತ್ತೆ ಎಂದು ಸದಾನಂದ ಗೌಡರಿಗೆ ಹೇಳುತ್ತಾರೆ. ಅದರಂತೆ ನಾಣ್ಯ ಇಟ್ಟುಕೊಂಡ ಸದಾ ಅವರ ಜೀವನದಲ್ಲಿ ಏಳಿಗೆ ಕಾಣಿಸತೊಡಗುತ್ತದೆ.
ಜೀವನದಲ್ಲಿ ತುಂಬಾ ನೋವನ್ನು ಅನುಭವಿಸಿದ್ದೇನೆ. ಅಪಘಾತ, ಆಪ್ತರ ಸಾವು ನೋವುಗಳನ್ನು ದುಃಖಿಸುತ್ತಿದ್ದ ದಿನಗಳಲ್ಲಿ, ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತು ಸದಾ ಕಾಲ ನಗು ಮುಖದಿಂದ ಇರಲು ಕಲಿತ್ತಿದ್ದು ಈ ನಾಣ್ಯದ ಮಹಿಮೆ ಇಂದಲೇ ಎಂದು ಸದಾನಂದ ಗೌಡರು ಹೇಳುತ್ತಾರೆ.
ಶ್ಯಾಮ್ ಭಟ್ ಅವರು ನೀಡಿದ್ದ ಬೆಳ್ಳಿಯ ನಾಣ್ಯವನ್ನು ನಾನು ಇಂದಿಗೂ ನನ್ನ ಪರ್ಸಿನಲ್ಲಿ ಹಾಕಿಕೊಂಡಿರುತ್ತೇನೆ. ಎಲ್ಲಿ ಹೋದರೂ ನಾಣ್ಯ ನನ್ನ ಜತೆಗೆ ಇರುತ್ತದೆ ಎಂದು ಸದಾನಂದ ಗೌಡರು ಹೇಳಿದರು.
ನಂತರ ಮಗುವಿನ ಹೆಸರಿನಲ್ಲಿ ದೀರ್ಘಾವಧಿ ಚಿನ್ನ ಹೂಡಿಕೆಯ ಯೋಜನೆಯಾದ 'ಮುಳಿಯ ಮಾಂಗಲ್ಯ ನಿಧಿ' ಯನ್ನು ಸಿಎಂ ಪತ್ನಿ ಡಾಟಿ ಅವರು ಉದ್ಘಾಟಿಸಿದರು. ಸದಾನಂದ
ದಂಪತಿಯನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಹರಸಿ ಬೀಳ್ಕೊಡಲಾಯಿತು.












Click it and Unblock the Notifications