ಸಿಎಂ ಪಟ್ಟ ಸಿಕ್ಕಿದ್ದು ಹೇಗೆ? ಹುಟ್ಟೂರಲ್ಲಿ ಸದಾ ಬಿಚ್ಚಿದ ರಹಸ್ಯ

ರಾಜಕೀಯದಲ್ಲಿ ಏಳಿಗೆ ಕಾಣಲು ಬಯಸಿದ್ದ ಆಸೆ ಕಂಗಳ ನಾಯಕನ ಕೈಗೆ ಇದೇ ರೀತಿ ನಾಣ್ಯ ಸಿಗುತ್ತದೆ. ನಂತರ ಆತ ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ. ಸಿಎಂ ಹುದ್ದೆಯೂ ಒಲಿದು ಬರುತ್ತದೆ. ಹೌದು, ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಜೀವನದಲ್ಲಿ ಇಂಥದ್ದೊಂದು ಪವಾಡ ನಡೆದಿದೆ.
ಸಿಎಂ ಪಟ್ಟ ಸಿಕ್ಕಿದ್ದು ಹೀಗೆ: ಇದನ್ನು ಸ್ವತಃ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರೇ ಹೇಳಿಕೊಂಡಿದ್ದಾರೆ. ಹುಟ್ಟೂರಿಗೆ ಭೇಟಿ ನೀಡಿದ್ದ ಸದಾನಂದ ಗೌಡರು ನೇರವಾಗಿ ಪುತ್ತೂರಿನ ಹೆಸರಾಂತ ಮುಳಿಯ ಶ್ಯಾಂ ಜುವೆಲ್ಲರ್ ನ ಮಳಿಗೆಗೆ ಭೇಟಿ ಕೊಟ್ಟರು.
"ಪುತ್ತೂರಿನ ಮುಳಿಯ ಶ್ಯಾಂ ಕಡದ ತೇರು ಎಳೆಯಲು ಮುಳಿಯ ಜ್ಯುವೆಲ್ಲರಿ ನೂತನ ಷೋರೂಂಗೆ ಭೇಟಿ ಕೊಟ್ಟ ಸಿಎಂ ಡೀವಿ, ಈ ಸಂದರ್ಭದಲ್ಲಿ ಸಂಸ್ಥೆಯ ಮುಳಿಯ ಶ್ಯಾಮ್ ಭಟ್, ಪತ್ನಿ ಸುಲೋಚನಾ ಭಟ್ ಹಾಗೂ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಹಾಗೂ ಕೇಶವ ಪ್ರಸಾದ್ ಮುಳಿಯ ಅವರಿಗೆ ಆತ್ಮೀಯವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಜುವೆಲ್ಲರಿಯ ಶ್ಯಾಂ ಭಟ್ ಅವರು ನೀಡಿದ್ದ ಬೆಳ್ಳಿಯ ನಾಣ್ಯದ ಫಲವಾಗಿ ನಾನು ಜೀವನದಲ್ಲಿ ಅಭಿವೃದ್ದಿಯನ್ನು ಹೊಂದುತ್ತಾ ಹೋದೆ. ನಾನು ಮುಖ್ಯಮಂತ್ರಿಯಾಗಲೂ ಇದೇ ನಾಣ್ಯ ಕಾರಣವಾಗಿದೆ. ಜೊತೆಗೆ ದೇವರ ಕೃಪೆಯೂ ಇತ್ತು. ಇಂದಿಗೂ ನಾಣ್ಯ ನನ್ನ ಜೇಬಿನಲ್ಲಿದೆ. ಎಂದಿಗೂ ನನ್ನ ಬಳಿ ಇರುತ್ತದೆ ಎಂದು ನಾಣ್ಯವನ್ನು ಎಲ್ಲರಿಗೂ ತೋರಿಸಿದರು.
ಸದಾನಂದ ಸದಾ ಕಾಲ ಆನಂದವಾಗಿರಲು ಬೆಳ್ಳಿ ನಾಣ್ಯ ಕಾರಣವೇ? ಅಸಲಿಗೆ ಸಿಕ್ಕಿದ್ದು ಯಾವಾಗ? ...












Click it and Unblock the Notifications