ಬಾಲಕೃಷ್ಣೇಗೌಡರ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ

ಪದ್ಮನಾಭಗರ, ವಿಜಯನಗರ ಮತ್ತು ಚಂದ್ರಾ ಲೇಔಟ್ ನಲ್ಲಿರುವ ಬಾಲಕೃಷ್ಣೇಗೌಡರ ಮನೆ, ಕಚೇರಿಗಳು ಮತ್ತು ಮೈಸೂರಿನಲ್ಲಿರುವ ಅವರ ಮಾವನ (ಪತ್ನಿ ಕವಿತಾ ಅವರ ತಂದೆ) ಮನೆಯ ಮೇಲೂ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಜತೆಗೆ, ಬಾಲಕೃಷ್ಣೇಗೌಡರ ಒಡೆತನದಲ್ಲಿರುವ ಕಂಪನಿಗಳ ನಾಲ್ಕು ಕಚೇರಿಗಳ ಮೇಲೂ ಈ ದಾಳಿ ನಡೆದಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅಣ್ಣ ಬಾಲಕೃಷ್ಣೇಗೌಡ ಅವರು ಕೆಎಎಸ್ ಸೇವೆಯಲ್ಲಿದ್ದಾಗ ಭ್ರಷ್ಟಾಚಾರದ ಮೂಲಕ ಆಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ, ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಗಮನಾರ್ಹವೆಂದರೆ ಪ್ರಕರಣ ಸಂಬಂಧ ಶೀಘ್ರವೇ ತನಿಖೆ ಮುಕ್ತಾಯಗೊಳಿಸಿ, ಎಫ್ಐಆರ್ ದಾಖಲಿಸುವಂತೆ ಲೋಕಾಯುಕ್ತ ನ್ಯಾಯಾಲಯವು ಕಳೆದ ವಾರ ಲೋಕಾಯಯುಕ್ತ ಪೊಲೀಸರಿಗೆ ಸೂಚಿಸಿತ್ತು. ದೂರಿಗೆ ಸಂಬಂಧಪಟ್ಟಂತೆ ದೂರುದಾರ ಬಾಲಕೃಷ್ಣ ಹೇಳಿಕೆ ಪಡೆದುಕೊಂಡ ವಿಶೇಷ ನ್ಯಾಯಾಲಯ, ಸೆ. 24ರಂದು ದೂರನ್ನು ಊರ್ಜಿತಗೊಳಿಸಿತ್ತು.












Click it and Unblock the Notifications