ಉಪಲೋಕಾಯುಕ್ತ ಗುರುರಾಜನ್ ರಾಜೀನಾಮೆಗೆ ಕಾರಣವಾದರೂ ಏನು?

ಬೆಂಗಳೂರಿನಲ್ಲೇ ಒಂದಕ್ಕಿಂತ ಹೆಚ್ಚು ಫ್ಲಾಟ್ ಹೊಂದಿದ್ದರೂ ನ್ಯಾಯಾಂಗ ಇಲಾಖೆ ಗೃಹ ನಿರ್ಮಾಣ ಸಂಘದಿಂದ ಸುಮಾರು 23 ಲಕ್ಷ ರೂ. ಕೊಟ್ಟು ನಿವೇಶನ ಪಡೆದುಕೊಂಡಿರುವುದು ನ್ಯಾ. ಗುರುರಾಜನ್ ಮೇಲಿನ ಆರೋಪ.
ಬೆಂಗಳೂರಿನಲ್ಲಿ ಸ್ವಂತ ನಿವೇಶನ ಅಥವಾ ಮನೆ ಹೊಂದಿದ್ದರೆ ಬೇರೆ ಯಾವುದೇ ಹೌಸಿಂಗ್ ಸೊಸೈಟಿಯಿಂದ ನಿವೇಶನ ಪಡೆದುಕೊಳ್ಳುವುದು ಕಾನೂನುಬಾಹಿರ. ಆದರೆ, ನ್ಯಾ. ಗುರುರಾಜನ್ ಮಲ್ಲೇಶ್ವರದ ಫ್ಲಾಟ್‌ನ್ನು 1988ರಲ್ಲೇ ಖರೀದಿಸಿದ್ದರು. ಬಳಿಕ ನ್ಯಾಯಾಂಗ ಇಲಾಖೆ ಸೊಸೈಟಿಯಿಂದಲೂ ಸೈಟ್ ಪಡೆದುಕೊಂಡಿದ್ದಾರೆ.
ನ್ಯಾ. ಗುರುರಾಜನ್ ಅವರು ಮಲ್ಲೇಶ್ವರ ಚಿತ್ರಪುರ ಸೊಸೈಟಿ ಅಪಾರ್ಟ್‌ಮೆಂಟ್‌ನಲ್ಲಿ ಎರಡು ಬೆಡ್‌ರೂಮ್‌ನ ಫ್ಲಾಟ್ ಹೊಂದಿದ್ದಾರೆ. ಅಲ್ಲದೆ, ಬೆಂಗಳೂರು ಉತ್ತರ ತಾಲೂಕಿನ ಅಳ್ಳಾಲಸಂದ್ರದಲ್ಲಿರುವ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಂಘದಿಂದ 2001ರಲ್ಲಿ 42/60 ಚದರ ಅಡಿ ನಿವೇಶನ ಪಡೆದುಕೊಂಡಿದ್ದಾರೆ.












Click it and Unblock the Notifications