ಸಚಿವ ರೇಣುಕಾಗೆ ಬೆದರಿಕೆ ಪತ್ರ ಬರೆದವ ಪತ್ತೆ

ಕೊಲೆ ಬೆದರಿಕೆ ಪತ್ರದ ಜಾಡು ಹಿಡಿದು ಹೊರಟ ಪೊಲೀಸರು ಸೊರಬಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಎರಡು ತಂಡಗಳಲ್ಲಿ ಪೊಲೀಸರು ನಡೆಸಿದ ತನಿಖೆ ಕೊನೆ ಹಂತ ತಲುಪಿದೆ ಎನ್ನಲಾಗಿದೆ. ಸೊರಬ ಪೊಲೀಸ್ ಠಾಣೆ, ತಾಲೂಕು ಕಚೇರಿ ಹಾಗೂ
ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಂಡ ಕೊನೆಗೆ ಸಿ ಮೋಹನ್ ಕುಮಾರ್ ಎಂಬುವರ ಮನೆ ಹತ್ತಿರ ಬಂದು ನಿಂತಿೆ.
ಸೊರಬದಲ್ಲಿರುವ ಮತದಾರರ ವಿವರವನ್ನು ಪಡೆದು ಸಿ. ಮೋಹನ್ ಕುಮಾರ್ ಎಂಬುವವರ ವಿವರ ಸಂಗ್ರಹಿಸಲಾಗಿದೆ. ಆದರೆ ಮೋಹನ್ ಮನೆಗೆ ಬೀಗ ಹಾಕಿದ್ದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸಿ.ಮೋಹನ್ ಕುಮಾರ್ ನನ್ನು ಆರೋಪಿ ಎಂದು ಪರಿಗಣಿಸಿರುವ ಪೊಲೀಸ್ ತಂಡ ತೀವ್ರ ಶೋಧ ನಡೆಸಿದೆ.
ಸಚಿವ ರೇಣುಕಾ ಅವರಿಂದ ಹಣ ಪಡೆದು ನಕ್ಸಲರಿಗೆ ಕೊಡಲು ಎಲ್ಟಿಟಿಇ ತಂಡ ನಡೆಸಿದ ತಂತ್ರ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಪೊಲೀಸರು ಅಲ್ಲಗೆಳೆದಿದ್ದಾರೆ.
ಮೋಹನ್ ಕುಮಾರ್ ಸೆರೆಸಿಕ್ಕ ನಂತರ ಬೆದರಿಕೆ ಒಡ್ಡಿದ್ದು ಯಾಕೆ? ಇದರ ಹಿಂದೆ ಬೇರೆ ಯಾರಾದರೂ ಇದ್ದಾರಾ? ಎಂಬುದು ತಿಳಿಯಲಿದೆ. ಸದ್ಯಕ್ಕೆ ಇದು ಎಲ್ಟಿಟಿಇ ಕೃತ್ಯ ಅಲ್ಲ ಎಂದು ಸ್ಫಷ್ಟವಾಗಿ ಹೇಳಬಹುದು ಎಂದು ಶಿವಮೊಗ್ಗ ಪೊಲೀಸರು ತಿಳಿಸಿದ್ದಾರೆ.
ಬಗ್ಗೆ ಮಾಹಿತಿ ಸಂಗ್ರಹಿಸಲು ತನಿಖೆ ಕೈಗೊಂಡ ತಂಡ, ಸಂಜೆಯವರೆಗೂ ರಿಶೀಲನೆ ನಡೆಸಿತು. ಆರೋಪಿಯ ಪತ್ತೆಗಾಗಿ ತೀವ್ರ ಯೋಧ ಕಾರ್ಯವನ್ನು ಕೈಗೊಂಡಿದ್ದಾರೆ.












Click it and Unblock the Notifications