ಸಿದ್ದರಾಮಯ್ಯನ ಕಾಲ್ಗುಣ ಸರಿಯಿಲ್ಲ: ಚುಂಬನಾಚಾರ್ಯ

ಇದರೊಂದಿಗೆ 'ಅವ ರೇಣುಕಾಚಾರ್ಯ ಅಲ್ಲ 'ಚುಂಬನಾಚಾರ್ಯ' ಎಂದು ಸಿದ್ದರಾಮಯ್ಯ ಅವರು 'ಟಗರು ಕಿಕ್' ಕೊಟ್ಟಿದ್ದ 10 ದಿನಗಳಲ್ಲೇ 'ಚುಂಬನಾಚಾರ್ಯ'ರು ಅಲ್ಲಲ್ಲ ರೇಣುಕಾಚಾರ್ಯರು ತಕ್ಕ ಉತ್ತರ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಸೇರಿದ ನಂತರ ಆ ಪಕ್ಷ ಎದುರಿಸಿದ ಎಲ್ಲಾ ಚುನಾವಣೆಗಳಲ್ಲೂ ಸೋಲುವುದಕ್ಕೆ ಕಾರಣ ಸಿದ್ದರಾಮಯ್ಯನವರ ಕಾಲ ಗುಣವೇ ಸರಿಯಿಲ್ಲದಿರುವುದು ಎಂದರು.
ಸಿದ್ದರಾಮಯ್ಯ ಬಾಯಿಗೆ ಬಂದಂತೆ ಹಗುರವಾಗಿ ಮಾತನಾಡುವುದನ್ನು ಕೂಡಲೇ ನಿಲ್ಲಿಸಬೇಕು. ಅವರಿಗಿಂತ ಹೆಚ್ಚಾಗಿ ನಮ್ಮ ಬಳಿಯೇ ಗ್ರಾಮೀಣ ಭಾಷೆಯ ಭಂಡಾರವಿದೆ. ನಮಗೂ ಮಾತನಾಡುವುದಕ್ಕೆ ಗೊತ್ತಿದೆ ಎಂದು ಹರಿಹಾಯ್ದರು.












Click it and Unblock the Notifications