ಡೋಲು ಬಾರಿಸಲು ನಿರಾಕರಿಸಿದ್ದಕ್ಕೆ ದಲಿತರ ನಿಷೇಧ

ಈ ದಬ್ಬಾಳಿಕೆ ನಡೆದಿರುವುದು ಮೈಸೂರು ಜಿಲ್ಲೆಯ ನಾಗಮಂಗಲ ತಾಲೂಕಿನ ಕಸುವನಹಳ್ಳಿ ಗ್ರಾಮದಲ್ಲಿ. ನಗರಗಳು ಎಷ್ಟೇ ಮುಂದುವರಿದಿದ್ದರೂ ಹಳ್ಳಿಗಳಲ್ಲಿ ಇಂತಹ ಆಚರಣೆಗಳು, ಮೇಲು ಕೀಳು ಜಾತಿಗಳ ತಾರತಮ್ಯ ಇನ್ನೂ ಜೀವಂತವಾಗಿರುವುದನ್ನು ಈ ಪ್ರಕರಣ ಸಾಬೀತುಮಾಡಿದೆ.
ನಿಷೇಧಕ್ಕೊಳಗಾಗಿರುವ ಶಿವರಾಜ್ ಮತ್ತು ಸೀತಾರಾಂರನ್ನು ಮಾಯಮ್ಮ ದೇವಸ್ಥಾನಕ್ಕೆ ಕರೆದು ಊರಹಿರಿಯರಾದ ಮುದ್ದೇಗೌಡ, ಪರಿಗೌಡ ಮುಂತಾದವರು ಜಾತಿಯ ಹೆಸರು ಹೇಳಿ ವಾಚಾಮಗೋಚರವಾಗಿ ನಿಂದಿಸಿದ್ದಾರೆ. ಈಗ ಅವರನ್ನು ಊರಿನಿಂದಲೇ ಹೊರಹಾಕುವ ಬೆದರಿಕೆಯನ್ನೂ ಹಾಕಲಾಗಿದೆ.
ಇಷ್ಟು ಮಾತ್ರವಲ್ಲ, ಕರೆಂಟಿಲ್ಲದ ಹಳ್ಳಿಯಲ್ಲಿ ಕೆರೆಗೆ ನೀರು ತರಲು ಬರುವ ಹೆಂಗಸರಿಗೆ 'ಬೆತ್ತಲೆ ಮೆರವಣಿಗೆ' ಮಾಡುವ ಬೆದರಿಕೆಯನ್ನು ಮೇಲ್ಜಾತಿಯವರು ಒಡ್ಡಿದ್ದಾರೆನ್ನಲಾಗಿದೆ. ಅವರು ಸ್ವತಂತ್ರವಾಗಿ ದುಡಿದು ಬದುಕಲು ಕೂಡ ಬಿಡುತ್ತಿಲ್ಲ. ಕಸುನವಹಳ್ಳಿಯವರೇ ಆದ ಶಾಸಕ ಸುರೇಶ್ ಗೌಡ ಅವರು ಎರಡೂ ಜಾತಿಯವರನ್ನು ಕರೆದು ಪಂಚಾಯತಿ ಮಾಡಿಸಿದರೂ ಹೆಚ್ಚಿನ ಬದಲಾವಣೆ ಇನ್ನೂ ಬಂದಿಲ್ಲ.












Click it and Unblock the Notifications