ಕಗ್ಗತ್ತಲ ನಾಡಿನಲ್ಲಿ ವಿದ್ಯುತ್ ಇಲ್ಲದೆ ಜೀವನ ನಡೆಸಲು ಸಿದ್ಧರಾಗಿ

load-shedding-imminent-in-karnataka-power-shortage
ಬೆಂಗಳೂರು, ಅ.10: ಕಗ್ಗತ್ತಲ ನಾಡು ಆಫ್ರಿಕಾ ಅಲ್ಲಲ್ಲ ಇಲ್ಲೇ ಕರ್ನಾಟಕದಲ್ಲಿಯೇ ದರುಶನವಾಗಿದೆ. ಸೋ, ವಿದ್ಯುತ್ ಇಲ್ಲದೆ ಜೀವನ ನಡೆಸಲು ಸರ್ವತಯಾರಿ ನಡೆಸಿ. ಇದು ದೀಪಾವಳಿ ಮುನ್ನಾ ಸಂದರ್ಭದಲ್ಲಿ ಸರಕಾರದ ಕೊಡುಗೆಯಾಗಿದೆ.

ಸದ್ಯಕ್ಕೆ ಒಂದು ತಿಂಗಳು ಇದು ಅನಿವಾರ್ಯವಾಗಲಿದೆ. ಇಂದಿನಿಂದ ಬಹುತೇಕ, ಹಳ್ಳಿಗಳಲ್ಲಿ 6 ಗಂಟೆ ಮತ್ತು ನಗರದಲ್ಲಿ 4 ಗಂಟೆ ಲೋಡ್ ಶೆಡ್ಡಿಂಗ್ ಅಧಿಕೃತವಾಗಿ ಘೋಷಣೆಯಾಗಲಿದೆ.

ರಾಜ್ಯದಲ್ಲಿ ತೀವ್ರಗೊಂಡಿರುವ ವಿದ್ಯುತ್ ಕ್ಷಾಮದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ 4 ಗಂಟೆ ಲೋಡ್ ಶೆಡ್ಡಿಂಗ್ ಮಾಡುವ ಸಾಧ್ಯತೆ ಇದೆ. ರಾಜ್ಯಕ್ಕೆ ಪ್ರತಿದಿನ ಸರಾಸರಿ 160 ದಶಲಕ್ಷ ಯೂನಿಟ್ ವಿದ್ಯುತ್ ಅಗತ್ಯವಿದೆ. ಆದರೆ ಶನಿವಾರದ ವೇಳೆಗೆ ರಾಜ್ಯದ ವಿದ್ಯುತ್ ಪೂರೈಕೆ ದಿನವೊಂದಕ್ಕೆ 136 ದಶಲಕ್ಷ ಯೂನಿಟ್ ಆಗಿತ್ತು ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.

ಕಲ್ಲಿದ್ದಲು ಪೂರೈಕೆ ವ್ಯತ್ಯಯದ ಕಾರಣ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ 8 ಘಟಕಗಳ ಪೈಕಿ ಕೇವಲ 5 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಕೆಲವೊಮ್ಮೆ ಕೇವಲ 4 ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಕೇಂದ್ರದಲ್ಲಿ ಸಚಿವರಾಗಿರುವ ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಮತ್ತಿತರರು ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಮತ್ತು ಕೇಂದ್ರ ವಿದ್ಯುತ್ ಗ್ರಿಡ್‌ನಿಂದ ವಿದ್ಯುತ್ ನೀಡುವಂತೆ ಒತ್ತಡ ಹೇರಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+