ವಿಷ ಸೇವಿಸಿ ಸತ್ತ ಕಳ್ಳನಿಗಾಗಿ ಕುರುಗೋಡು ಬಂದ್!

ಪಟ್ಟಣದ ಎನ್. ರಾಜಶೇಖರಗೌಡರ ವೃತ್ತದಲ್ಲಿ ಮಾತ್ರ ಬಂದ್ ಬಿಸಿ ವ್ಯಾಪಾರಿಗಳು, ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ಮುಟ್ಟಿದೆ. ಉಳಿದಂತೆ ಎಲ್ಲಿಯೂ ಕೂಡ ಈ ಬಂದ್‌ಗೆ ಸಾರ್ವಜನಿಕರಿಂದ ಸ್ಪಂದನೆ ಸಿಕ್ಕಿಲ್ಲ. ಮೃತ ಆರೋಪಿ ಶಿವರಾಜನು ಬಳ್ಳಾರಿ ಸಮೀಪದ ಬಂಡಿಹಟ್ಟಿ ನಿವಾಸಿ ಆಗಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಈ ಬಂದ್ ಕಾಟಾಚಾರದ ಪ್ರತಿಭಟನೆ ಎನಿಸಿದೆ.
50 - 75 ಜನರರಿದ್ದ ಪ್ರತಿಭಟನಾಕಾರರು ಟೆಂಟ್ ಹಾಕಿಕೊಂಡು ಸರ್ಕಾರದ ವಿರುದ್ಧ, ಪೊಲೀಸ್ ವ್ಯವಸ್ಥೆ ವಿರುದ್ಧ ಮತ್ತು ಆಡಳಿತಶಾಹಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರತಿಯಲ್ಲಿ ಭಾಷಣಗಳನ್ನೂ ಮಾಡಿ, ಮೃತನ ಪರ ಅನುಕಂಪದ ಮಾತುಗಳನ್ನಾಡಿದರು. ವ್ಯವಸ್ಥೆ ವಿರುದ್ಧ ತಮ್ಮ ಆಕ್ರೋಶ ತೋರಿದರು.
ಸಹಾಯಕ ಆಯುಕ್ತ ಸೆಂಥಿಲ್ ಅವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ 'ಇಡೀ ಪ್ರಕರಣದಲ್ಲಿ ಸಿಪಿಐ ಎ.ಆರ್. ಕಲಾದಗಿ ತಪ್ಪಿತಸ್ತರು. ಕುಡತಿನಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಬೇಕಾದ ಪ್ರಕರಣವನ್ನು ಕುರುಗೋಡು ಠಾಣೆಗೆ ಕರೆಯಿಸಿ, ಅನಗತ್ಯವಾಗಿ ಎಸ್ಸೈ, ಎಎಸೈ ಅವರು ಅಮಾನತು ಆಗುವಂತೆ ಮಾಡಿದ್ಧಾರೆ. ಸಿಪಿಐ ಎ.ಆರ್. ಕಲಾದಗಿ ಅವರನ್ನು ಕೂಡಲೇ ಅಮಾನತು ಮಾಡಬೇಕು. ಮೃತನ ಕುಟುಂಬಕ್ಕೆ ಸರ್ಕಾರವೇ ನೇರವಾಗಿ ಪರಿಹಾರ ನೀಡಬೇಕು" ಎಂದು ಆಗ್ರಹಿಸಿದರು.












Click it and Unblock the Notifications