ಸಂಜೀವ್ ಭಟ್ ಬಂಧನ: ಮೋದಿ ವಿರುದ್ಧ ಎದ್ದುಕುಳಿತ ಐಪಿಎಸ್ ಪಟಾಲಂ

gujarat-ips-association-supports-sanjiv-bhatt
ಅಹಮದಾಬಾದ್‌, ಅ.9: ಗುಜರಾತ್‌ ಮುಖ್ಯಮಂತ್ರಿಗಾದಿಯಲ್ಲಿ ಒಂದು ದಶಕದಿಂದ ವಿರಾಜಮಾನರಾಗಿರುವ ನರೇಂದ್ರ ಮೋದಿ ಸಂಕಷ್ಟಕ್ಕೆ ಈಡಾಗಿದ್ದಾರೆ. ರಾಜ್ಯದ ಐಪಿಎಸ್ ಒಕ್ಕೂಟ ಮೋದಿಯನ್ನು ಗುರಿಯಾಗಿಸಿಕೊಂಡು ಹಿರಿಯ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಬಂಧನವನ್ನು ಪ್ರಶ್ನಿಸಿದ್ದಾರೆ.

ಈ ಸಂಬಂಧ ಒಕ್ಕೂಟವು ಶನಿವಾರ ಸಭೆ ಸೇರಿತ್ತು. ಸಂಜೀವ್ ಭಟ್ ಅವರನ್ನು ಬೆಂಬಲಿಸಿ, ನಿರ್ಣಯವನ್ನೂ ಕೈಗೊಂಡಿದೆ. ಈ ಮಧ್ಯೆ, ಸಂಜೀವ್ ಭಟ್ ಜಾಮೀನು ಅರ್ಜಿ ಕುರಿತು ನ್ಯಾಯಾಲಯ ಸೋಮವಾರ ತೀರ್ಪು ನೀಡಲಿದೆ.

ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ತಮ್ಮ ಮನೆಗೆ ಆಗಮಿಸಿ, ತಮ್ಮ ಪತಿ ಸಂಜೀವ್ ಪರ ಒಕ್ಕೂಟ ತೆಗೆದುಕೊಂಡಿರುವ ನಿಲುವಿನ ಬಗ್ಗೆ ತಿಳಿಸಿದರು ಎಂದು ಸಂಜೀವ್ ಅವರ ಪತ್ನಿ ಶ್ವೇತಾ ಭಟ್ ಹೇಳಿದ್ದಾರೆ. ಸಂಜೀವ್ ಭಟ್, 2002 ರಲ್ಲಿ ಗುಜರಾತಿನಲ್ಲಿ ನಡೆದ ಹತ್ಯಾಕಾಂಡದಲ್ಲಿ ಮುಖ್ಯಮಂತ್ರಿಯ ಪಾತ್ರವನ್ನು ಬಯಲಿಗೆಳೆದು ನರೇಂದ್ರ ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಇದೇ ವೇಳೆ, ರಾಜ್ಯದಲ್ಲಿ ಹಂಗಾಮಿ ಡಿಜಿಪಿ ಬದಲು ಕಾಯಂ ಡಿಜಿಪಿ ಅವರನ್ನು ನೇಮಿಸಬೇಕು ಎಂದು ಒಕ್ಕೂಟವು ಸರಕಾರವನ್ನು ಒತ್ತಾಯಿಸಿದೆ. ಚಿತ್ರರಂಜನ ಸಿಂಗ್ ಪ್ರಸ್ತುತ ರಾಜ್ಯ ಡಿಜಿಪಿಯಾಗಿ ಕಾರ್ಯನಿರ್ವಿಹಿಸುತ್ತಿದ್ದಾರೆ.

ಕರ್ನಾಟಕದಲ್ಲೂ, ಸಂಜೀವ್ ಭಟ್ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಪಾಪ್ಯುಲರ್ ಫ್ರಂಟ್ ಸಹ ಪ್ರತಿಭಟನೆಗಿಳಿದಿದೆ. ಸಂಜೀವ್ ಭಟ್ ಅವರನ್ನು ಬಂಧಿಸಿ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆ ನೀಡುತ್ತಿರುವ ಗುಜರಾತ್ ಸರ್ಕಾರದ ಕ್ರಮವನ್ನು ಖಂಡಿಸಿದೆ.

ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+