ಯೋಗೇಶ್ವರ್ ವಜಾ ನನ್ನ ಕೆಲ್ಸವಲ್ಲ : ರಾಜ್ಯಪಾಲ

ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಸೂಚಿಸಿರುವುದು ನಿಜ ಆದರೆ, ಅಂತಿಮ ನಿರ್ಧಾರ ಕೈಗೊಳ್ಳುವ ಜವಾಬ್ದಾರಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹಾಗೂ ಸಂಪುಟಕ್ಕೆ ಇದೆ. ಅದು ಅವರ ಕೆಲಸ ಎಂದು ರಾಜ್ಯಪಾಲರು ಹೇಳಿದ್ದಾರೆ.
ಶನಿವಾರದಂದು ರಾಜಭವನಕ್ಕೆ ತೆರಳಿ ತಮ್ಮ ದುಃಖ ತೋಡಿಕೊಳ್ಳಲು ಬಯಸಿದ್ದ ಸಚಿವ ಯೋಗೇಶ್ವರ್ ಅವರನ್ನು ಮಾತು ಕೂಡಾ ಆಡಿಸಿದರೆ ರಾಜ್ಯಪಾಲರು ಬೇರೆ ಕಡೆ ತೆರಳಿದ್ದಾರೆ.
ಸಚಿವ ಯೋಗೇಶ್ವರ್ ಅವರ ಮೇಲೆ ಎರಡು ರಾಜಕೀಯ ಪಕ್ಷಗಳಿಂದ ದೂರುಗಳು ಬಂದಿರುವುದು ನಿಜ, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಮುಂದಿನ ಕ್ರಮ ಕೈಗೊಳ್ಳುವುದು ಸರ್ಕಾರದ ನಿರ್ಧಾರಕ್ಕೆ ಬಿಟ್ಟದ್ದು ಎಂದು ರಾಜ್ಯಪಾಲರು ಹೇಳಿದರು.
ಹದಗೆಟ್ಟು ಹೋಗಿರುವ ಸಮಾಜವನ್ನು ಸಂಪೂರ್ಣ ಶುದ್ಧಿ ಮಾಡಲು ನಾನೇನು ಬಸವಣ್ಣ ಅಲ್ಲ ಎಂದು ರಾಜ್ಯಪಾಲರು ನಗೆಯಾಡಿದರು,












Click it and Unblock the Notifications