ಬಳ್ಳಾರಿ ಬಿಜೆಪಿ ಟೀಂನಿಂದ ಸಿಎಂಗೆ ರಾಜೀನಾಮೆ ಬೆದರಿಕೆ

ಜನಾರ್ದನ ರೆಡ್ಡಿಯ ಆಪ್ತರಾದ ಕೆಲವು ಸಂಸದರು ಹಾಗೂ ಶಾಸಕ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರನ್ನು ಗೃಹ ಕಚೇರಿ 'ಕೃಷ್ಣಾ"ದಲ್ಲಿ ಭೇಟಿ ಮಾಡಿದರು.
ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯ ರಕ್ಷಣೆಗೆ ಸರ್ಕಾರ ಯಾವುದೇ ರೀತಿ ಸಹಕಾರ ನೀಡಿಲ್ಲ. ಪಕ್ಷ ಅಧಿಕಾರಕ್ಕೆ ಬರುವಾಗ ರೆಡ್ಡಿಯವರಿಂದ ಸಹಕಾರ ಪಡೆದು ಈಗ ಅವರ ಆಪ್ತರನ್ನೆಲ್ಲ ಕಡೆಗಣಿಸಲಾಗುತ್ತಿದೆ ಎಂದು ಟೀಂ ಬಳ್ಳಾರಿ ಆಕ್ರೋಶ ವ್ಯಕ್ತಪಡಿಸಿದೆ.
ಶ್ರೀರಾಮುಲುರಿಗೆ ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ನಾವೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಸಂಸದ ಫಕ್ಕೀರಪ್ಪ, ಜೆ.ಶಾಂತಾ, ಶಾಸಕಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಸುರೇಶ್ ಬಾಬು, ನೇಮಿನಾಥ ನಾಯಕ್, ಚಂದ್ರ ನಾಯಕ್ ಮತ್ತಿತರರು ಸಿಎಂಗೆ ಎಚ್ಚರಿಕೆ ನೀಡಿದ ಪ್ರಮುಖರಾಗಿದ್ದಾರೆ












Click it and Unblock the Notifications