ಕೃಷ್ಣನ ಜನ್ಮಸ್ಥಾನಕ್ಕೆ ಕೆಪಿಎಸ್ ಸಿ ಕುಖ್ಯಾತಿಯ ಡಾ. ಕೃಷ್ಣ

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಕೆಎಎಸ್ ಅಭ್ಯರ್ಥಿಗೆ ಜೀವಬೆದರಿಕೆ ಹಾಕಿರುವ ಆರೋಪ ಅವರ ಮೇಲಿದೆ. ಪ್ರಕರಣ ಸಂಬಂಧ ಅಧೀನ ನ್ಯಾಯಾಲಯ ಹಾಗೂ ಹೈಕೋರ್ಟ್ ಇತ್ತೀಚೆಗೆ ಕೃಷ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು.
ಜತೆಗೆ ಸ್ವಜನ ಪಕ್ಷಪಾತ, ಒಂದೇ ವರ್ಗದ ಜನರಿಗೆ ಹೆಚ್ಚು ಉದ್ಯೋಗ ಅವಕಾಶ ಸಿಗುವಂತೆ ಮಾಡಿರುವುದು ಹಾಗೂ ಸಹೋದ್ಯೋಗಿಗಳು ಮತ್ತು ಕೆಪಿಎಸ್‌ಸಿ ಸಿಬ್ಬಂದಿ ಮೇಲೆ ಒತ್ತಡ ಹೇರಿ ದಾಖಲೆಗಳನ್ನು ತಿದ್ದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ವಂಚಿಸಿರುವ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾ. ಎಚ್. ಬಿಳ್ಳಪ್ಪ ಅರ್ಜಿಯನ್ನು ವಜಾ ಮಾಡಿದ್ದರು.
2005ರಲ್ಲಿ ನಡೆದ ಕೆಎಎಸ್ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆಗೆ ಗೈರು ಹಾಜರಾಗುವಂತೆ ಅಲ್ಲಾಭಕ್ಷ್ ಮೇಲೆ ಎಚ್.ಎನ್. ಕೃಷ್ಣ ಒತ್ತಡ ಹೇರಿದ್ದರು. ಜತೆಗೆ ಈ ಅಭ್ಯರ್ಥಿಯನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಜೀವಬೆದರಿಕೆ ಹಾಕಿ ಕೆಲವು ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications