ಜಂಬೂ ಸವಾರಿಗೆ ಸಿಎಂ ಸದಾನಂದ ಗೌಡ ಚಾಲನೆ

ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಮೂಲಕ ಜಂಬುಸವಾರಿಗೆ ಚಾಲನೆ ನೀಡಿದ್ದಾರೆ. ಸಿಎಂ ಈ ಸಂದರ್ಭದಲ್ಲಿ ನಾಡಿನ ಜನತೆಗೆ ದಸರಾ ಶುಭಾಶಯ ಕೋರಿದ್ದಾರೆ. ಪೊಲೀಸ್ ಬ್ಯಾಂಡ್, ಅಶ್ವಪಡೆ, ಗಜಪಡೆಯ ಜೊತೆ ಮೆರವಣಿಗೆ ನಡೆಯಲಿದೆ. ಮೈಸೂರಿನ ಈಗಿನ ದೃಷ್ಯಗಳು ರಾಜಮನೆತನದ ಗತವ್ಯಭವವನ್ನು ನೆನಪಿಸುತ್ತಿದೆ
ಮೈಸೂರು ದಸರಾದ ಸಂಭ್ರಮ ನೋಡಲು ಎರಡು ಕಣ್ಣುಗಳು ಸಾಲದಾಗಿವೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ನೆರೆದಿರುವ ಜನರು. ಸಂಭ್ರಮ, ಸಡಗರವೇ ಧರೆಗಿಳಿದು ಬಂದಂತೆ ಭಾಸವಾಗುತ್ತಿದೆ. 138 ಕಲಾ ಪ್ರಕಾರಗಳು, 30 ಜಿಲ್ಲೆಗಳ 34 ಸ್ತಬ್ದ ಚಿತ್ರಗಳು ಕಣ್ಣಿಗೆ ಹಬ್ಬ ನೀಡಲು ಆರಂಭಿಸಿವೆ.
ಜಂಬೂ ಸವಾರಿ ಸಾಗುವ ಮಾರ್ಗವಾದ ಅರಮನೆ ಆವರಣದಿಂದ ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಹೈವೆ ಸರ್ಕಲ್ ಮೂಲಕ ಬನ್ನಿಮಂಟಪದವರೆಗೆ ಇಕ್ಕೆಡೆಗಳಲ್ಲಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲೆಲ್ಲೂ ಬಿಗಿ ಪೊಲೀಸ್ ಬಂದೋ ಬಸ್ತ್ ಕಂಡು ಬಂದಿದೆ.












Click it and Unblock the Notifications