ಯಡಿಯೂರಪ್ಪ ಅಕ್ರಮ ಸಾಬೀತು: ಲೋಕಾಯುಕ್ತ ಪೊಲೀಸ್

ಯಡಿಯೂರಪ್ಪ ಅಕ್ರಮಗಳ ವಿಚಾರಣೆಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಹಸಿರು ನಿಶಾನೆ ತೋರಿಸಿದ್ದರೆ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ಅಕ್ರಮಗಳನ್ನು ಸಾಬೀತುಪಡಿಸುವಷ್ಟು ಸಾಕ್ಷ್ಯಗಳನ್ನು ತಾನು ಕಲೆ ಹಾಕಿರುವುದಾಗಿ ತಿಳಿಸಿದೆ.
ಪ್ರಕರಣವೇನು?: ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ಆಪ್ತ ಹಾಗೂ ಸಂಬಂಧಿಕರಿಗೆ ಸರಕಾರಿ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಆರೋಪಿ ಸಿರಾಜಿನ್ ಬಾಷಾ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಎರಡನೆ ಹಾಗೂ ಮೂರನೆ ಖಾಸಗಿ ದೂರನ್ನು ದಾಖಲಿಸಿದ್ದರು. ಬಾಷಾರ ಪ್ರಮಾಣೀಕೃತ ಹೇಳಿಕೆ ಪಡೆದಿದ್ದ ವಿಶೇಷ ನ್ಯಾಯಾಲಯ ಆ. 8ರಂದು ಯಡಿಯೂರಪ್ಪರಿಗೆ ಸಮನ್ಸ್ ಜಾರಿ ಮಾಡಿತ್ತು.
ಅಲ್ಲದೆ, ಬಿಎಸ್‌ವೈ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪುನ್ನು ಕಾಯ್ದಿರಿಸಿತ್ತು. ಬಂಧನದ ಭೀತಿಯಿಂದಾಗಿ ಯಡಿಯೂರಪ್ಪ ಎರಡೂ ದೂರುಗಳ ಸಂಬಂಧ ಅಧೀನ ನ್ಯಾಯಾಲಯ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ಇದನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಮಾನ್ಯ ಮಾಡಿತ್ತು.












Click it and Unblock the Notifications