ರಾಜ್ಯ ಕತ್ತಲೆಯಲ್ಲಿದೆ , ಶೋಭಾ ಬೆಳಗುತ್ತಿದ್ದಾರೆ: ರೇವಣ್ಣ

Minister Shobha Karandlaje
ಬೆಂಗಳೂರು, ಅ.5: ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವ ಸೃಷ್ಟಿಸಿ, ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿ ಮಾಡುವ ನಾಟಕವಾಡುತ್ತಿರುವ ಇಂಧನ ಸಚಿವೆ ಶೋಭಾ ಬೆಳಗುತ್ತಿದ್ದಾರೆ, ರಾಜ್ಯ ಕತ್ತಲೆಯಲ್ಲಿ ಮುಳುಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ರೇವಣ್ಣ ಆರೋಪ ಮಾಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ 6,415 ಕೋಟಿ ರೂ. ವೆಚ್ಚದಲ್ಲಿ 11,575 ಮಿಲಿಯನ್ ಯುನಿಟ್ ವಿದ್ಯುತ್‌ ಅನ್ನು ಖಾಸಗಿ ಕಂಪನಿಗಳಿಂದ ಸರ್ಕಾರ ಖರೀದಿಸಿದೆ.

ಉತ್ಪಾದನೆ ಬಗ್ಗೆ ಗಮನ ಕೊಡದೆ ವಿದ್ಯುತ್ ಖರೀದಿಯಲ್ಲೇ ಹೆಚ್ಚಿನ ಆಸಕ್ತಿ ತೋರುವಲ್ಲಿ ಶೋಭಾ ಅವರು ನಿರತರಾಗಿದ್ದಾರೆ.

ಉತ್ಪಾದನೆಯಾದ ವಿದ್ಯುತ್ ಅನ್ನು ಸರಿಯಾಗಿ ಮನೆ ಮನೆಗಳಿಗೆ ತಲುಪಿಸಲು ಕೆಪಿಟಿಸಿಎಲ್ ಗೆ ಸಾಧ್ಯಾಗುತ್ತಿಲ್ಲ. ದುಬಾರಿ ವೆಚ್ಚದ ವಿದ್ಯುತ್ ಖರೀದಿಗಾಗಿ ಕೃತಕ ಆಭಾವವನ್ನು ಸೃಷ್ಟಿಸಲಾಗುತ್ತಿದೆ ಎಂದು ರೇವಣ್ಣ ದೂರಿದ್ದಾರೆ.

ಜನಕ್ಕೆ ಗಾಯದ ಮೇಲೆ ಬರೆ ಎಳೆದಂತೆ ವಿದ್ಯುತ್ ದರ ಏರಿಕೆ ಮಾಡಲು ಸರ್ಕಾರ ಚಿಂತಿಸಿರುವುದು ಹೇಯ ಕೃತ್ಯ ಎಂದು ರೇವಣ್ಣ ಹೇಳಿದ್ದಾರೆ.

ಖಾಸಗಿ ಕಂಪೆನಿಗಳಿಂದ ದುಬಾರಿ ವೆಚ್ಚದ ವಿದ್ಯುತ್ ಖರೀದಿ ಮಾಡುವ ಉದ್ದೇಶದಿಂದ ಬಿಜೆಪಿ ಸರಕಾರ ರಾಜ್ಯದಲ್ಲಿ ಕೃತಕ ವಿದ್ಯುತ್ ಅಭಾವ ಸೃಷ್ಟಿ ಮಾಡಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

ಬೆಸ್ಕಾಂ 2 ಸಾವಿರ ಕೋಟಿ ರೂ. ನಷ್ಟದಲ್ಲಿದೆ. ಜೆಡಿಎಸ್ ನೇತೃತ್ವದ ಸರಕಾರದಲ್ಲಿ ಬೆಂಗಳೂರಿನಲ್ಲಿ ಯಾವತ್ತೂ ಲೋಡ್ ಶೆಡ್ಡಿಂಗ್ ಮಾಡಿರಲಿಲ್ಲ. 'ಬೆಂಗಳೂರು ಬೆಳಗಿಸುತ್ತೇವೆ" ಎಂದು ಓಟು ಗಿಟ್ಟಿಸಿಕೊಂಡ ಬಿಜೆಪಿ ಸರಕಾರ ನಗರದ ಜನತೆಗೆ ದಸರಾ ಕೊಡುಗೆಯಾಗಿ ಕತ್ತಲು ನೀಡಿದೆ ಎಂದು ರೇವಣ್ಣ ಲೇವಡಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+