ಸಚಿವೆ ಶೋಭಾಗೆ ಬಿಬಿಎಂಪಿ ಸದಸ್ಯರ ಘೆರಾವ್

ನೆಲಮಂಗಲದ ದೊಡ್ಡ ಬಿದರಕಲ್ಲುನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸುತ್ತುವರೆದು ಜೆಡಿಎಸ್ ಕಾರ್ಯಕರ್ತರು, ಬಿಬಿಎಂಪಿ ಸದಸ್ಯ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆಡಿದೆ.
ಸ್ಥಳೀಯ ಬಿಬಿಎಂಪಿ ಸದಸ್ಯೆ ಜೆಡಿಎಸ್‌ನ ಗಾಯತ್ರಿ ಜವರೇಗೌಡ ಅವರನ್ನು ಅಹ್ವಾನಿಸಿಲ್ಲ.ಆಹ್ವಾನ ಪತ್ರಿಕೆಯಲ್ಲೂ ಅವರ ಹೆಸರನ್ನು ಮುದ್ರಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಸಚಿವೆ ಶೋಭಾ ವಿರುದ್ಧಕಪ್ಪು ಬಾವುಟ ಪ್ರದರ್ಶಿಸಿದರು.
ಇದನ್ನು ವಿರೋಧಿಸಿದ ಬಿಜೆಪಿ ಕಾರ್ಯಕರ್ತರೊಡನೆ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಲಘು ಲಾಠಿ ಪ್ರಹಾರ ನಡೆಸಿ ಎಲ್ಲರನ್ನು ಚದುರಿಸಿದರು.
ದೊಡ್ಡ ಬಿದರಕಲ್ಲು ವಾರ್ಡ್ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಈ ಕ್ಷೇತ್ರವನ್ನು ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುತ್ತಾರೆ. ಈ ವಾರ್ಡ್‌ಗೆ ಜೆಡಿಎಸ್‌ನ ಗಾಯತ್ರಿ ಜವರೇಗೌಡ ಪಾಲಿಕೆ ಸದಸ್ಯೆಯಾಗಿದ್ದಾರೆ.












Click it and Unblock the Notifications