ಸಚಿನ್ ಮೇಲಿನ ಸರ್ಕಾರದ ಪ್ರೇಮ ಭ್ರಷ್ಟತೆಗೆ ನಾಂದಿ?

Sachin Tendulkar
ಮುಂಬೈ, ಸೆ.30: ದೇಶದ ಪ್ರತಿಷ್ಠಿತ ವ್ಯಕ್ತಿಗಳ ಪೈಕಿ ಅತಿ ತೆರಿಗೆ ಕಟ್ಟುವ ಮಂದಿಗಳ ಸಾಲಲ್ಲಿ ಸಚಿನ್ ಕೂಡಾ ಸೇರುತ್ತಾರೆ. ಹಾಗೆ ಕೋಟಿಗಟ್ಟಲೆ ತೆರಿಗೆ ವಂಚನೆ ಆರೋಪ ಕೂಡಾ ಸಚಿನ್ ಮೇಲೆ ಬಂದಿದ್ದು ಸುಳ್ಳಲ್ಲ.

ಬಾಂದ್ರಾ ನಿವಾಸದ ಓಸಿ ಕಥೆ ಬಗ್ಗೆ ಸಚಿನ್ ಏನು ಹೇಳಿಕೆ ನೀಡಿಲ್ಲ. ಗೃಹಪ್ರವೇಶದ ಮಹೂರ್ತ ಫಿಕ್ಸ್ ಆದರೂ ನಾಲ್ಕು ದಿನ ತಡವಾಗಿ ಮನೆಒಕ್ಕಲು ಕಾರ್ಯ ಮುಗಿಸ ಬೇಕಾಗಿ ಬಂದಿದ್ದಕ್ಕೆ ಮ್ಯಾನೇಜರ್ ಮೇಲೆ ಸಚಿನ್ ಕೋಪಗೊಳ್ಳದೆ ಇರಲಾಗಿಲ್ಲ.

ಇನ್ನೊಂದೆಡೆ ಓಸಿ ಆರೋಪದಿಂದ ಸಚಿನ್ ಅವರನ್ನು ಕೈಬಿಟ್ಟು ದಂಡ ಮಾಫಿ ಮಾಡುವಂತೆ ಬಿಎಂಸಿ ಆಯುಕ್ತ ಸುಬೋಧ್ ಕುಮಾರ್ ಅವರಿಗೆ ರಾಜ್ಯ ಸರ್ಕಾರ ಸೂಚಿಸಿ, ಭ್ರಷ್ಟತೆಗೆ ನಾಂದಿ ಹಾಡಿದ ಸಂಗತಿ ಹೊರಬಿದ್ದಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಜವಳಿ ಸಚಿವ ಮಹಮ್ಮದ್ ಆರೀಫ್ ನಸೀಮ್ ಖಾನ್, ಸುಬೋಧ್ ಅವರು ಕೈಗೊಂಡಿರು ಕ್ರಮ ಸರಿಯಾಗಿದೆ ಆದರೆ, ಸಚಿನ್ ಅಂತಾರಾಷ್ಟ್ರೀಯ ಕ್ರೀಡಾಪಟು, ನಮ್ಮ ದೇಶದ ಹೆಮ್ಮೆ ಅವರ ಮೇಲೆ ವೃಥಾ ಆರೋಪ ಮಾಡುವುದು ಸರಿಯಲ್ಲ, ಸ್ಪೆಷಲ್ ಕೇಸ್ ಎಂದು ಪರಿಗಣಿಸಿ, ನೋಡಿಕೊಂಡು ಕ್ರಮ ಜರುಗಿಸುವಂತೆ ಸೂಚಿಸಿದ್ದೇವೆ ಎಂದಿದ್ದಾರೆ.

ಪೆರಿ ಕ್ರಾಸ್ ರಸ್ತೆ ಹಾಗೂ ಟರ್ನರ್ ರಸ್ತೆಯ ಬಳಿ ಇರುವ ಸಚಿನ್ ಮನೆಗೆ ಆರಂಭದಲ್ಲೇ ವಿಘ್ನ ಎದುರಾಗಿರುವುದಕ್ಕೆ ಹಳೆ ಮಾಲೀಕರನ್ನು, ಪೂಜೆ ಕೈಂಕರ್ಯ ನೆರವೇರಿಸಿದ ಪೂಜಾರಿಗಳನ್ನು ಸಚಿನ್ ಮ್ಯಾನೇಜರ್ ಸರಿಯಾಗಿ ವಿಚಾರಿಸಿಕೊಂಡಿದ್ದರಂತೆ.

ಸಚಿನ್ ಎಷ್ಟು ದೊಡ್ಡ ಕ್ರಿಕೆಟರ್ ಆದರೂ, ಕಾನೂನು ಪಾಲನೆ ಮಾಡದಿದ್ದ ಮೇಲೆ ಶಿಕ್ಷಾರ್ಹರೇ. ಫೆರಾರಿ ಕಾರಿಗೆ ಕೋಟಿ ರು ತೆರಿಗೆ ಮಾಫಿ ಸಿಕ್ಕಂತೆ ಎಲ್ಲದರಿಂದಲೂ ತೆರಿಗೆ ಮಾಫಿ ಮಾಡಿ ಶೀಘ್ರವೇ ಭಾರತ ರತ್ನ ಪದವಿಗೇರಿಸುವುದು ಸರ್ಕಾರದ ಉದ್ದೇಶ ಎಂದು ವಿರೋಧಿಗಳು ಕಿಡಿಯಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+