ಮಾಹಿತಿ ಅಯೋಗದ ಅಧ್ಯಕ್ಷ ಕೃಷ್ಣ ರಾಜೀನಾಮೆ

ಗುರುವಾರ ಸಂಜೆ ಎಚ್.ಎನ್.ಕೃಷ್ಣ ಅವರು ತಮ್ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್‌ಗೆ ಸಲ್ಲಿಸಿದ್ದಾರೆ.
ಆರೋಪಗಳೇನು: ಗೆಜೆಟೆಡ್ ಪ್ರೊಬೆಷನರ್(ಗ್ರೂಪ್ ಎ ಮತ್ತು ಬಿ) ಹುದ್ದೆ ನೇಮಕಾತಿಗಾಗಿ ಕೆಪಿಎಸ್‌ಸಿ 1998, 1999 ಮತ್ತು 2004ರಲ್ಲಿ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯಹವಾರ.
2005ರಲ್ಲಿ ಅಲ್ಲಾಭಕ್ಷ್ ಎಂಬ ಅಭ್ಯರ್ಥಿಗೆ ಮುಖ್ಯ ಪರೀಕ್ಷೆಗೆ ಹಾಜರಾಗದಂತೆ ಬೆದರಿಕೆ ಹಾಗೂ ಬಲವಂತವಾಗಿ ಹಾಜರಾತಿ ಹಾಗೂ ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದರು, ಖಲೀದ್ ಮಹಮ್ಮದ್ ಸೇರಿದಂತೆ 61 ಜನರ ದೂರು ಸಲ್ಲಿಸಿದ್ದರು.
ಹೈಕೋರ್ಟ್ ನ್ಯಾಯಮೂರ್ತಿ ಜೆಎಸ್ ಖೆಹರ್ ಆದೇಶದ ಮೇರೆಗೆ ಸಿಐಡಿ ಪೋಲೀಸರು ಕೃಷ್ಣರ ವಿರುದ್ಧ ಆ.12ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಐಪಿಸಿ ಸೆಕ್ಷನ್ 417, 718, 465, 466, 468, 471, 506, 120-B ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಬಂಧನ ಭೀತಿಯಿಂದಾಗಿ ಕೃಷ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಇತ್ತೀಚಿಗಷ್ಟೆ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಅವ್ಯಹಾರ ಆರೋಪ ಹೊತ್ತ ಕೃಷ್ಣ ಮಾಹಿತಿ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.











Click it and Unblock the Notifications