ಜಗನ್ ಆಸ್ತಿ ಹುಡುಕಿಕೊಂಡು ಉಡುಪಿಗೆ ಸಿಬಿಐ?

ಸಿಬಿಐ ತನ್ನ ತನಿಖೆಯನ್ನು ಬೆಂಗಳೂರು ಮಹಾನಗರ, ಉಡುಪಿಗೂ ವಿಸ್ತರಿಸುವ ಸೂಚನೆ ಸಿಕ್ಕಿದೆ. ಆದರೆ, ಸಿಬಿಐ ತಂಡ ತುಂಬ ಜಾಗರೂಕತೆಯಿಂದ ಗುಪ್ತವಾಗಿ ಮಾಹಿತಿ ಸಂಗ್ರಹಿಸುತ್ತಿದೆ.
ಜಗನ್ ಸ್ಥಿರಾಸ್ತಿಯಲ್ಲಿ ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಭೂಮಿ ಮತ್ತು ವಸತಿ ನಿವೇಶನಗಳು ಸೇರಿದೆ. ಇವುಗಳ ಮೊತ್ತ ಸುಮಾರು 150 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಶಿವಮೊಗ್ಗದಲ್ಲಿ ಪತ್ನಿ ಭಾರತಿ ಹೆಸರಿನಲ್ಲಿ 9 ಎಕರೆ ಭೂಮಿ, ಉಡುಪಿ ಜಿಲ್ಲೆಯಲ್ಲಿ 0.37 ಏಕರೆ ಭೂಮಿ ಇದೆ. ಇದೆಲ್ಲವೂ 2009ರಲ್ಲಿ ನೀಡಿದ ರಾಮನ ಲೆಕ್ಕ. [ಸಂಪೂರ್ಣ ವಿವರ ನೋಡಿ]
ಬೆಂಗಳೂರು ಡೀಲ್ ಗಳ ಅಡ್ಡ ಆಗಿತ್ತು: ಯಲಹಂಕ ಸಮೀಪ ಬಾಗಲೂರು ರಸ್ತೆಯಲ್ಲಿರುವ ಅವರ ನಿವಾಸದಿಂದ ಈ ಹಿಂದೆ ಸ್ವಾಧೀನ ಪಡಿಸಿಕೊಂಡ ದಾಖಲೆಗಳ ಆಧಾರದ ಮೇಲೆ ಬೇನಾಮಿ ಆಸ್ತಿಗಳ ಕುರಿತಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದೆ.
ಬೆಂಗಳೂರು, ರಾಮನಗರ ಜಿಲ್ಲೆಗಳಲ್ಲಿನ ತಾಲ್ಲೂಕು ಸಬ್‌ರಿಜಿಸ್ಟರ್ ಕಛೇರಿಗಳಲ್ಲಿ ಜಗನ್ ಬೇನಾಮಿ ಆಸ್ತಿಗಳ ವಿವರಗಳಿಗಾಗಿ ಸಿಬಿಐ ತೀವ್ರ ತಪಾಸಣೆ ನಡೆಸುತ್ತಿದೆ. ಸಿಬಿಐ ಅಧಿಕಾರಿಗಳು ತಂಡ ಸಮೇತ ಕಛೇರಿಗಳಿಗೆ ಭೇಟಿ ನೀಡದೆ ಒಬ್ಬಿಬ್ಬರು ಮಾತ್ರ ಕಛೇರಿಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ರಾಜಶೇಖರ ರೆಡ್ಡಿ ಆಂಧ್ರದ ಮುಖ್ಯಮಂತ್ರಿಯಾಗಿದ್ದಾಗ ಜಗನ್ ಬೆಂಗಳೂರಿನಲ್ಲೆ ವಾಸಿಸುತ್ತಿದ್ದರು. ಆಗ ಅವರ ನಿವಾಸ ಆಂಧ್ರಪ್ರದೇಶದ ನಾಯಕರಿಂದ ಕಿಕ್ಕಿರಿದು ತುಂಬಿರುತ್ತಿತ್ತು.
ಹಲವು ವ್ಯವಹಾರಗಳು ಇಲ್ಲೆ ಇತ್ಯರ್ಥವಾಗುತ್ತಿದ್ದವು. ಅಲ್ಲದೆ ಬೆಂಗಳೂರಿನ ಸುತ್ತಮುತ್ತ ಬೇನಾಮಿ ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications