ಯುಪಿಎನಿಂದ ಅಣ್ಣಾಗೆ 'ರಬ್ಬರ್ ಸ್ಟಾಂಪ್' ಪದವಿ ಆಫರ್

Anna Hazare for President post?
ನವದೆಹಲಿ, ಸೆ.30: ರಾಮಲೀಲಾದಲ್ಲಿ ಭ್ರಷ್ಟರ ವಿರುದ್ಧ ಹೋರಾಟ ನಡೆಸಿ ಭರ್ಜರಿ ಜನ ಬೆಂಬಲ ಪಡೆದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ರಾಷ್ಟ್ರಪತಿ ಪದವಿ ಆಫರ್ ನೀಡಲಾಗಿದೆ ಎಂದು ಸುದ್ದಿ ಹಬ್ಬಿದೆ.

ಇತ್ತೀಚೆಗೆ ಅಣ್ಣಾ ಹಜಾರೆ ಹುಟ್ಟೂರು ರಾಳೇಗಣ್‌ ಸಿದ್ಧಿಗೆ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರ ದಂಡೇ ಹರಿದು ಬಂದಿತ್ತು.

ಪ್ರತಿಭಾ ಪಾಟೀಲ್‌ ಅಧಿಕಾರಾವಧಿ ಮುಂದಿನ ವರ್ಷಕ್ಕೆ ಮುಗಿಯಲಿದೆ. ನಂತರ ರಾಷ್ಟ್ರಪತಿ ಹುದ್ದೆಗೆ ಅಣ್ಣಾ ಹಜಾರೆ ಏರಲಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ.

ಮಹಾರಾಷ್ಟ್ರದ ಕಂದಾಯ ಸಚಿವ ಬಾಳಾಸಾಹೇಬ್‌ ಥೋರಟ್‌, ಅಹಮದ್‌ನಗರದ ಸಂಸದ ಬಾಹುಸಾಹೇಬ್‌, ಮಾಜಿ ಲೋಕೋಪಯೋಗಿ ಸಚಿವ ವಿಜಯಸಿಂಹ ಮೋಹಿತೆ ಪಾಟೀಲ್‌ ಮತ್ತಿತರ ಕಾಂಗ್ರೆಸ್‌ ಮುಖಂಡರು ಹಜಾರೆ ದರ್ಶನ ಪಡೆದು ತೆರಳಿದ ಬಳಿಕ ಈ ರೀತಿ ಸುದ್ದಿ ಹಬ್ಬಿದೆ.

ಮರಾಠಿ ಪತ್ರಿಕೆಯೊಂದರಲ್ಲಿ ಕಾಂಗ್ರೆಸ್ ನಾಯಕರ ಆಫರ್ ಅನ್ನು ಅಣ್ಣಾ ಒಪ್ಪುವ ಸಾಧ್ಯರತೆಯಿದೆ ಎಂದು ಸಹ ಬರೆಯಲಾಗಿದೆ. ಆದರೆ, ರಾಳೇಗಾಂವ್ ಸಿದ್ಧಿ ಜನ ಮಾತ್ರ ಅಣ್ಣಾ ಎಂದು ನಮ್ಮ ಕೈ ಬಿಡುವುದಿಲ್ಲ ಎಂದು ನಂಬಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+