ಜಂತಕಲ್ಲು ಸೇರಿ 24 ಗಣಿ ಗುತ್ತಿಗೆ ರದ್ದತಿಗೆ ಶಿಫಾರಸು

ಅಕ್ರಮ ಗಣಿಗಾರಿಕೆಯನ್ನು ಕರ್ನಾಟಕದಲ್ಲಿ ಸ್ಥಗಿತಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದಾಗಿನಿಂದ ಗಣಿಗಾರಿಕೆ ರಾಜ್ಯದಲ್ಲಿ ಹೆಚ್ಚೂಕಡಿಮೆ ಸ್ಥಗಿತವಾದಂತಾಗಿದೆ. ಈಗ ಈ 24 ಗಣಿಗಳ ಗುತ್ತಿಗೆ ರದ್ದು ಮಾಡಬೇಕೆಂದು ಶಿಫಾರಸು ಮಾಡಿರುವುದು ಗಣಿ ಮಾಲಿಕರಿಗೆ ತಾಳಲಾರದ ಹೊಡೆತವಾಗಿದೆ.
ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗಡೆ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿವೆ ಎಂದು ನಮೂದಿಸಲ್ಪಟ್ಟು, ಸಿಬಿಐ ತನಿಖೆಗೆ ಒಳಪಟ್ಟಿರುವ ಡೆಕ್ಕನ್ ಮೈನಿಂಕ್ ಸಿಂಡಿಕೇಟ್, ಕೆ.ಎಂ. ಪಾರ್ವತಮ್ಮ ಮತ್ತು ಅಸೋಸಿಯೇಟೆಡ್ ಮೈನಿಂಗ್ ಕಾರ್ಪೊರೇಷನ್ ಕೂಡ ಈ ಪಟ್ಟಿಯಲ್ಲಿ ಸೇರಿವೆ.
ಉಳಿದಂತೆ ಸಂಡೂರಿನ ಜೆ.ಎಂ. ವೃಷಬೇಂದ್ರಯ್ಯ ಮೈನ್ಸ್, ಟ್ರೈಡೆಂಟ್ ಮಿನರಲ್ಸ್, ಎಸ್.ಎಲ್. ಜಯರಾಂ ಮೈನ್ಸ್, ಎಸ್.ಬಿ. ಮಿನರಲ್ಸ್, ವಿವೈಕೆ, ಶೇಕ್‌ಸಾಬ್ ಮೈನ್ಸ್, ವೀನಾಗ್ ಮೈನ್ಸ್, ಎಂಬಿಟಿ, ಹಿಂದ್ ಟ್ರೇಡರ್ಸ್, ರಾಜಾಪುರ ಮೈನ್ಸ್, ಎಸ್‌ಬಿ ಮಿನರಲ್ಸ್ (2530), ಎನ್. ರತ್ನಯ್ಯ (ನಾಮಾ ರತ್ನಯ್ಯ), ಆದರ್ಶ ಮೈನ್ಸ್, ಸ್ಪಾರ್ಕ್‌ಲೈನ್ಸ್ ಮೈನ್ಸ್, ಆರ್.ಎಂ. ಪೋಳ್ ಮೈನ್ಸ್, ಶಿವ ವಿಲಾಸ್ ಮೈನ್ಸ್, ಕಾರ್ತಿಕೇಯ ಮೈನ್ಸ್, ಮೆಹತಾ ಮೈನ್ಸ್, ಬಿ.ಆರ್.ವೈ. ಸಿಂಗ್ ಮೈನ್ಸ್ ಮತ್ತು ವಿವಾದಿತ ಜಂತಕಲ್ಲು ಮೈನ್ಸ್‌ನ ಗಣಿ ಗುತ್ತಿಗೆಯನ್ನು ರದ್ದು ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಶಿಫಾರಸು ಮಾಡಿದ್ದಾರೆ.












Click it and Unblock the Notifications