ಮಂಗಳೂರಿನಲ್ಲಿ ಶಾರದೆ ನವದುರ್ಗೆಯರ ಆರಾಧನೆ
ಮಂಗಳೂರು,
ಸೆ. 29 : ಮಂಗಳೂರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ' ಉತ್ಸವಕ್ಕೆ ಬುಧವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳ ಪ್ರತಿಷ್ಠೆಯನ್ನು ನೆರವೇರಿಸಲಾಯಿತು. ಈ ಮೂಲಕ ನವರಾತ್ರಿ ಉತ್ಸವ ಆರಂಭಗೊಂಡಿತು. ಉದ್ಯಮಿ ರಮೇಶ್ ಕುಮಾರ್ ದಂಪತಿ ದೀಪಬೆಳಗುವ ಮೂಲಕ ನಾಡಹಬ್ಬಕ್ಕೆ ಚಾಲನೆ ನೀಡಿದರು. id="toptextpromo">ಶಾರದಾ
ಮಾತೆಯೊಂದಿಗೆ ಮಹಾಗಣಪತಿ, ನವದುರ್ಗೆಯರ ಆರಾಧನೆ ಇಲ್ಲಿನ ವೈಶಿಷ್ಟ್ಯತೆ. ಶ್ರೀ ಶಾರದಾ ಮಾತೆ, ಆದಿಶಕ್ತಿಯೊಂದಿಗೆ ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿಯರನ್ನು ಭವ್ಯವಾದ ವಿಗ್ರಹಗಳ ರೂಪದಲ್ಲಿ ಆರಾಧಿಸಲಾಗುತ್ತಿದೆ. id='are-slot-1' class='oiad oi-axt oiadv'> id='top-searched-articles'>ನಿತ್ಯವೂ
ಸಹಸ್ರಾರು ಮಂದಿ ನವದುರ್ಗೆಯರನ್ನು ನೋಡಲು ಬರುತ್ತಾರೆ. ನವರಾತ್ರಿ ಉತ್ಸವ ಅದ್ದೂರು ಮೆರವಣಿಗೆಯೊಂದಿಗೆ ಸಂಪನ್ನವಾಗಲಿದೆ. ಕೇಂದ್ರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಅವರ ಸಾರಥ್ಯದಲ್ಲಿ ಮಂಗಳೂರು ದಸರಾ ಉತ್ಸವ ಜರಗುತ್ತಿದ್ದು ಮೆರವಣಿಗೆ ಸಾಗುವ ನಗರದ ರಸ್ತೆಗಳು ಈಗಾಲೇ ಸಿಂಗಾರಗೊಂಡು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ.











Click it and Unblock the Notifications