ಎಟಿಎಂ ಗಾರ್ಡ್ ಹತ್ಯೆ, 2 ಗಂಟೆಯಲ್ಲೇ ಹಂತಕ ಬಲೆಗೆ

ಪಾಟ್ನ ಮೂಲದ 22 ವರ್ಷದ ಯುವಕ ಸ್ಯಾಮುಯಲ್ ಎಂಬವನೇ ಗುರುವಾರ ಬೆಳಗ್ಗೆ ಸೆಕ್ಯುರಿಟಿ ಗಾರ್ಡ್ ಚಂದ್ರಪ್ಪ(55) ಎಂಬುವರನ್ನು ಬರ್ಬರವಾಗಿ ಕೊಂದಿದ್ದವನು ಎಂದು ದಕ್ಷಿಣ ವಲಯ ಡಿಸಿಪಿ ಸೋನಿಯಾ ನಾರಂಗ್ ಹೇಳಿದ್ದಾರೆ.
ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ನ ಎಟಿಎಂ ಕೇಂದ್ರದಲ್ಲಿ ನಡೆದ ಕೊಲೆಗೆ ಸಿಸಿಟಿವಿ ವಿಡಿಯೋ ತುಣುಕು ಸಹಾಯ ಮಾಡಿದೆ.
ನಡೆದಿದ್ದು ಹೇಗೆ?: ಗುರುವಾರ ಮುಂಜಾನೆ 4.30ರ ಸುಮಾರಿಗೆ ಎಟಿಎಂ ದರೋಡೆಗೆ ಯತ್ನಿಸಿದ ಸ್ಯಾಮುಯಲ್ ಗೆ ಚಂದ್ರಪ್ಪ ಅಡ್ಡಿಪಡಿಸಿದ್ದಾನೆ. ಈ ಸಂದರ್ಭದಲ್ಲಿ ಚಂದ್ರಪ್ಪನ ತಲೆಗೆ ಕಬ್ಬಿಣದ ರಾಡ್ ನಲ್ಲಿ ಸ್ಯಾಮುಯಲ್ ಹೊಡೆಡಿದ್ದಾನೆ. ನಂತರ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಆದರೆ ನಂತರ ಎಟಿಎಂ ಹಣ ಕಸಿಯಲು ವಿಫಲ ಯತ್ನ ನಡೆಸಿದ್ದಾನೆ. ಕೊನೆಗೆ ಅಲ್ಲಿಂದ ಪರಾರಿಯಾಗಿದ್ದಾರೆ.
ಸಿಸಿಟಿವಿ ಫುಟೇಜ್ ನೋಡಿದ ಪೊಲೀಸರು ಚೀತಾ ಪೊಲೀಸ್ ಗಸ್ತು ವಾಹನ ಸಿಬ್ಬಂದಿಗೆ ಮೆಸೇಜ್ ಕೊಟ್ಟಿದ್ದಾರೆ. ಉತ್ತರಹಳ್ಳಿ ರಸ್ತೆ ಹತ್ತಿರ ಅನುಮಾನಸ್ಪದವಾಗಿ ತಿರುಗಿದ್ದ ಸ್ಯಾಮುಯಲ್(ಸೈಮನ್) ಅನ್ನು ಪೊಲೀಸರು ತಡೆದು ವಿಚಾರಿಸಿದ್ದಾರೆ.
ಸ್ಯಾಮುಯಲ್ ಬ್ಯಾಗ್ ನಲ್ಲಿ ರಕ್ತದ ಕಲೆ ಕಂಡು ಅನುಮಾನಗೊಂಡು ಬ್ಯಾಗ್ ಪರಿಶೀಲಿಸಿದಾಗ ಸುತ್ತಿಗೆ, ಉಳಿ, ರಾಡ್ ಮುಂತಾದ ಅಸ್ತ್ರಗಳು ಕಂಡಿವೆ. ಸುಬ್ರಮಣ್ಯ ಪುರ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಸೆಕ್ಯುರಿಟಿ ಗಾರ್ಡ್ ಕೊಲೆ ವಿಷಯ ಹೊರಬಂದಿದೆ.












Click it and Unblock the Notifications